×
Ad

ಛಿಛೋರೆಯಲ್ಲಿ ತಾಯಿ ಪಾತ್ರದಲ್ಲಿ ಶ್ರದ್ಧಾ ಕಪೂರ್

Update: 2018-10-13 18:38 IST

ದಂಗಾಲ್ ನಿರ್ದೇಶಕ ನಿತೇಶ್ ತಿವಾರಿ ಅವರ ಮುಂದಿನ ಚಿತ್ರ ‘ಛಿಛೋರೆ’ಯಲ್ಲಿ ಶ್ರದ್ಧಾ ಕಫೂರ್ ತಾಯಿಯ ಪಾತ್ರ ನಿರ್ವಹಿಸಲು ಎಲ್ಲ ಸಿದ್ಧತೆ ನಡೆಸಿದ್ದಾರೆ. 2019 ಆಗಸ್ಟ್ 30 ಬಿಡುಗಡೆ ದಿನಾಂಕದೊಂದಿಗೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರದ ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ಸಾಜಿದ್ ನಾಡಿಯಾಡ್‌ವಾಲ ಹಾಗೂ ಫಾಕ್ಸ್ ಸ್ಟಾರ್ ಸ್ಟುಡಿಯೋ ನಿರ್ಮಾಣದ ‘ಛಿಛೋರೆ’ ಟೈಮ್‌ಪಾಸ್ ಚಿತ್ರ ಎಂದು ಶ್ರದ್ಧಾ ಕಪೂರ್ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರ ಪಾತ್ರದ ಬಗ್ಗೆ ವಿಚಾರಿಸಿದಾಗ ಈ ಪ್ರೊಜೆಕ್ಟ್‌ನ ನಿಕಟ ಮೂಲ, ಚಿತ್ರದ ಶ್ರದ್ಧಾ ಅವರ ಪಾತ್ರ ಹಾಗೂ ಪ್ರತಿಯೊಂದು ಪಾತ್ರವನ್ನು ಪೋಸ್ಟರ್‌ನಲ್ಲಿ ನೋಡಿ ಎಂದು ತಿಳಿಸಿದೆ. ಶ್ರದ್ಧಾ ಅವರು ತಾಯಿಯ ಮಾತ್ರ ಮಾಡುತ್ತಿರುವುದು ಇದೇ ಮೊದಲು. ಆದುದರಿಂದ ಈ ಚಿತ್ರ ಕುತೂಹಲ ಸೃಷ್ಟಿಸಿದೆ. ‘ಸ್ತ್ರೀ’ ಯಶಸ್ಸಿನಿಂದ ಸಂತಸರಾಗಿರುವ ಶ್ರದ್ಧಾ ಕಪೂರ್ ಅಮೋಲ್ ಗುಪ್ತೆ ಅವರ ಸೈನಾ ಚಿತ್ರೀಕರಣದಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಇದು ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ಅವರ ಬಯೋಪಿಕ್. ಶ್ರದ್ಧಾ ಕಪೂರ್ ಅವರ ಬಿಡುಗಡೆಗೊಂಡ ಕೊನೆಯ ಚಿತ್ರ ‘ಬತ್ತಿ ಗುಲ್ ಮೀಟರ್ ಚಾಲು’. ಇದರಲ್ಲಿ ಶಾಹಿದ್ ಕಪೂರ್‌ಗೆ ಜೊತೆಯಾಗಿ ಶ್ರದ್ಧಾ ಕಪೂರ್ ನಟಿಸಿದ್ದರು. ಇದು ಬಾಕ್ಸ್ ಆಫೀಸಿನಲ್ಲಿ ಸರಿಸುಮಾರು ಯಶಸ್ವಿಯಾಗಿತ್ತು. ಬಿಡುಗಡೆಯಾಗಲಿರುವ ಶ್ರದ್ಧಾ ಅವರ ಮುಂದಿನ ಚಿತ್ರ ಪ್ರಭಾಸ್ ಅವರೊಂದಿಗಿನ ‘ಸಾಹೊ’.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News