ಜರ್ಮನಿಯಲ್ಲಿ ಪ್ರಶಸ್ತಿ ಗೆದ್ದ ಪ್ರಿಯಾಂಕಾ ನಿರ್ಮಾಣದ ಪಹುನಾ

Update: 2018-10-13 13:11 GMT

ನಟಿ ಪ್ರಿಯಾಂಕಾ ಚೋಪ್ರಾರ ಪರ್ಪಲ್ ಪೆಬಲ್ ಪಿಕ್ಚರ್ಸ್ ನಿರ್ಮಿಸಿರುವ ಸಿಕ್ಕಿಂ ಸಿನೆಮಾ ಪಹುನಾ ಜರ್ಮನಿಯಲ್ಲಿ ನಡೆದ ಶ್ಲಿಂಜೆಲ್ ಅಂತರ್‌ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಉತ್ತಮ ಸಿನೆಮಾ (ವಿಮರ್ಶಕರ ಆಯ್ಕೆ) ಮತ್ತು ಅಂತರ್‌ರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ವಿಶೇಷ ಉಲ್ಲೇಖ ಪ್ರಶಸ್ತಿಯನ್ನು ಪಹುನಾ ಗೆದ್ದುಕೊಂಡಿದೆ.

ಪಾಖಿ ಎ.ಟೈರ್‌ವಾಲಾ ನಿರ್ದೇಶನದ ಪಹುನಾ:ದ ಲಿಟ್‌ಲ್ ವಿಸಿಟರ್ಸ್ ಚಿತ್ರವು ಮಾವೋವಾದಿಗಳ ಗಲಭೆಯಿಂದ ತಪ್ಪಿಸಿ ಕೊಳ್ಳಲು ನೇಪಾಳದ ಹಳ್ಳಿಯಿಂದ ಸಿಕ್ಕಿಮ್‌ಗೆ ಪರಾರಿ ಯಾಗುವ ಸಮಯದಲ್ಲಿ ತಮ್ಮ ಹೆತ್ತವರಿಂದ ಬೇರ್ಪಡುವ ಮೂವರು ಮಕ್ಕಳ ಕತೆಯನ್ನು ಹೊಂದಿದೆ. ಚಿತ್ರದಲ್ಲಿ ಇಶಿಕಾ ಗುರುಂಗ್, ಅನ್ಮೋಲ್ ಲಿಂಬು ಮತ್ತು ಸುಜೋಯ್ ರಾಯ್ ನಟಿಸಿದ್ದಾರೆ.

ಬಯಲು ಶೌಚದ ಕುರಿತು ನೀಲ ಮಾಧಬ್ ಪಾಂಡ ನಿರ್ದೇಶಿಸಿರುವ ಹಲ್ಕಾ (2018) ಚಿತ್ರದ ನಟನೆಗಾಗಿ ತಥಾಸ್ತು, ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

2017ರ ಟೊರೊಂಟೊ ಅಂತರ್‌ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪಹುನಾ ವರ್ಲ್ಡ್ ಪ್ರೀಮಿಯರ್ ನಡೆದಿತ್ತು.

ಪಹುನಾ ಸಿನೆಮಾ ನಮಗೆಲ್ಲರಿಗೂ ಒಂದು ವಿಶೇಷ ಸಿನೆಮಾವಾಗುಳಿಯಲಿದೆ ಎಂದು ಪರ್ಪಲ್ ಪೆಬಲ್ಸ್ ಪಿಕ್ಚರ್ಸ್ ನ ಎಂ.ಡಿ. ಮತ್ತು ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News