ನಾಲ್ಕು ಭಾಷೆಗಳಲ್ಲಿ ತಯಾರಾಗಲಿದೆ ಭೈರವ ಗೀತಾ

Update: 2018-10-13 13:13 GMT

ಬಹುಭಾಷಾ ಚಿತ್ರ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸದ್ಯ ಸಿನೆಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಿರ್ಮಾಣದ ಮುಂದಿನ ಚಿತ್ರ ‘ಭೈರವ ಗೀತಾ’ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಕ್ಟೋಬರ್ 26ರಂದು ತೆರೆಕಾಣಲು ಸಿದ್ಧತೆ ನಡೆಸುತ್ತಿರುವ ಈ ಚಿತ್ರ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಕಾಣಲಿದೆ. ಆರಂಭದಲ್ಲಿ ಈ ಚಿತ್ರವನ್ನು ತೆಲುಗು ಮತ್ತು ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಇದೀಗ ತಮಿಳು ಮತ್ತು ಮಲಯಾಂನಲ್ಲೂ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಜಾತಿ ಸಮಸ್ಯೆಯನ್ನು ಎದುರಿಸುವ ಪ್ರೇಮಿಗಳ ಪ್ರೇಮ ಕತೆಯನ್ನು ಭೈರವ ಗೀತಾ ಹೊಂದಿದೆ. ಈ ಚಿತ್ರದ ಮೂಲಕ ಸಿದ್ಧಾರ್ಥ ಶಂಕರ್‌ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕನ್ನಡ ನಟ ಧನಂಜಯ್ ನಟಿಸುತ್ತಿರುವ ಈ ಚಿತ್ರದ ಮೂಲಕ ನಟಿ ಇರಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News