ಮತ್ತೆ ಒಂದಾಗಲಿರುವ ದೀಪಿಕಾ- ಕಪೂರ್

Update: 2018-10-13 13:15 GMT

ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಅತಿಯಾಗಿ ಇಷ್ಟಪಟ್ಟಿರುವ ಜೋಡಿಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ರಣಬೀರ್ ಸಿಂಗ್ ಜೋಡಿಯೂ ಒಂದು. ಇವರು ಜೊತೆಯಾಗಿ ನಟಿಸಿರುವ ಬಹುತೇಕ ಎಲ್ಲ ಸಿನೆಮಾಗಳು ಯಶಸ್ವಿಯಾಗಿವೆ. ಒಂದು ಕಾಲದಲ್ಲಿ ಪ್ರಣಯ ಹಕ್ಕಿಗಳಾಗಿ ಹಾರಾಡಿದ್ದ ದೀಪಿಕಾ-ರಣಬೀರ್ ನಂತರ ತಮ್ಮ ಪ್ರೇಮ ಕಾವ್ಯಕ್ಕೆ ಕೊನೆ ಹಾಡಿದ್ದರೂ ಈಗಲೂ ಉತ್ತಮ ಗೆಳೆಯರಾಗಿದ್ದಾರೆ. ಇವರು ಜೊತೆಯಾಗಿ ನಟಿಸಿದ್ದ ಕೊನೆಯ ಸಿನೆಮಾ ‘ತಮಾಷಾ’ ತೆರೆಕಂಡು ಮೂರು ವರ್ಷಗಳೇ ಕಳೆದಿವೆ. ಇದೀಗ ಲವ್ ರಂಜನ್ ನಿರ್ದೇಶನದ ಸಿನೆಮಾವೊಂದರಲ್ಲಿ ಈ ಜೋಡಿ ಮತ್ತೆ ಒಂದಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಚಿತ್ರದ ನಾಯಕನಾಗಿ ರಣಬೀರ್ ಸಿಂಗ್‌ನನ್ನು ರಂಜನ್ ಈಗಾಗಲೇ ಆಯ್ಕೆ ಮಾಡಿದ್ದು ಅಜಯ್ ದೇವಗನ್ ಮತ್ತು ತಬು ಕೂಡಾ ನಟಿಸುತ್ತಿದ್ದಾರೆ. ಆದರೆ ನಾಯಕಿಯ ಪಾತ್ರಕ್ಕೆ ಹುಡುಕಾಟ ಮುಂದುವರಿದಿದೆ. ಸಿನೆಮಾ ಮೂಲಗಳ ಪ್ರಕಾರ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆಯನ್ನು ಕರೆತರಲು ರಂಜನ್ ಬಯಸಿದ್ದು ಆಕೆ ಕೂಡಾ ರಣಬೀರ್ ಜೊತೆ ನಟಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News