ವಾಯುಮಾಲಿನ್ಯದ ಬಲೆಯಲ್ಲಿ ದಿಲ್ಲಿ, ವಾಯುಗುಣಮಟ್ಟ ತೀರಾ ಕೆಳಮಟ್ಟಕ್ಕೆ

Update: 2018-10-13 16:25 GMT

ಹೊಸದಿಲ್ಲಿ, ಅ.13: ನೆರೆಹೊರೆಯ ರಾಜ್ಯಗಳಾದ ಪಂಜಾಬ್ ಹಾಗೂ ಹರ್ಯಾಣಗಳಲ್ಲಿ ರೈತರು ಪೈರಿನ ಜೊಂಡುಗಳನ್ನು ವ್ಯಾಪಕವಾಗಿ ಸುಡುತ್ತಿರುವುದರಿಂದಾಗಿ ದಿಲ್ಲಿಯಲ್ಲಿ ವಾಯುಮಾಲಿನ್ಯ ತೀರಾ ಹದಗೆಟ್ಟಿದೆ. ದಿಲ್ಲಿಯಲ್ಲಿ ಶನಿವಾರ ಬೆಳಗ್ಗಿನ ವೇಳೆಗೆ ವಾಯು ಗುಣಮಟ್ಟದ ಸೂಚ್ಯಂಕವು 699ಕ್ಕೆ ತಲುಪಿದ್ದು, ಇದು ವಾಯುಮಾಲಿನ್ಯದ ಅಪಾಯಕಾರಿ ಅಥವಾ ತೀವ್ರತೆಯ ಮಟ ್ಟ (ಎಕ್ಯೂಐ)ಕ್ಕಿಂತ ಅಧಿಕವಾಗಿದೆ.

 ಶನಿವಾರ ಮಧ್ಯಾಹ್ನ 3:30ರ ವೇಳೆಗೆ, ನೊಯ್ಡಾದಲ್ಲಿ ಎಕ್ಯೂಐ 323, ಧೀರ್‌ಪುರ್‌ನಲ್ಲಿ 319, ಪೀತಾಂಬರದಲ್ಲಿ 313, ಮಥುರಾ ರಸ್ತೆಯಲ್ಲಿ 312 ಹಾಗೂ ದಿಲ್ಲಿ ವಿವಿಯಲ್ಲಿ 308 ಆಗಿದ್ದು, ಇವೆಲ್ಲವೂ ವಾಯುಗುಣಮಟ್ಟದಲ್ಲಿ ಅತ್ಯಂತ ಕಳಪೆ ಶ್ರೇಣಿಯ ಬಳಿಗೆ ಬರುತ್ತದೆ.

50ರವರೆಗಿನ ವಾಯು ಗುಣಮಟ್ಟ ಸೂಚ್ಯಂಕವನ್ನು ‘ಉತ್ತಮ’ವೆಂಬುದಾಗಿ ಪರಿಗಣಿಸಲಾಗಿದೆ.

ದಿಲ್ಲಿ ಸರಕಾರದ ಪರಿಸರ ಸಚಿವ ಇಮ್ರಾನ್ ಹುಸೈನ್ ಅವರು ಶುಕ್ರವಾರ ಟ್ವಿಟರ್‌ನಲ್ಲಿ ಹೇಳಿಕೆಯೊಂದನ್ನು ನೀಡಿ, ದಿಲ್ಲಿ ಸರಕಾವು ಕೇಂದ್ರ ಹಾಗೂ ಪಂಜಾಬ್, ಹರ್ಯಾಣ, ಉತ್ತರಪ್ರದೇಶ ಹಾಗೂ ರಾಜಸ್ಥಾನ ಸರಕಾರಗಳಿಗೆ ಪತ್ರ ಬರೆದು, ಈ ದೀರ್ಘಸಮಯದ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವಂತೆ ಆಗ್ರಹಿಸಿದ್ದಾರೆ.

ನೆರೆಹೊರೆಯ ರಾಜ್ಯಗಳಲ್ಲಿ ಪೈರಿನ ಜೊಂಡುಗಳನ್ನು ಸುಟ್ಟುಹಾಕುತ್ತಿರುವುದರಿಂದ ದಿಲ್ಲಿಯ ವಾಯುಮಾಲಿನ್ಯ ಹದಗೆಡುತ್ತಿರುವುದರ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತಂದ ಹೊರತಾಗಿಯೂ ಅದು ಆ ನಿಟ್ಟಿನಲ್ಲಿ ಯಾವುದೇ ಸೂಕ್ತ ಕ್ರಮವನ್ನು ಕೈಗೊಂಡಿಲ್ಲವೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಈ ಮಧ್ಯೆ ಕೇಂದ್ರ ಸರಕಾರವು ದಿಲ್ಲಿಯಲ್ಲಿ ವಾಯುಮಾಲಿನ್ಯ ಮುನ್ಸೂಚನೆ ವ್ಯವಸ್ಥೆಗೆ ಚಾಲನೆ ನೀಡಲಿದೆ. ವಾಯು ಗುಣಮಟ್ಟ ಮುನ್ನೆಚ್ಚರಿಕೆ ವ್ಯವಸ್ಥೆಯು, ಎರಡು ದಿನ ಮುಂಚಿತವಾಗಿ ವಾಯುವಿನ ಗುಣಮಟ್ಟದ ಬಗ್ಗೆ ಭವಿಷ್ಯ ನುಡಿಯಲಿದೆ. ಕೆಲವು ಸಮಯದ ಬಳಿಕ, ಈ ವ್ಯವಸ್ಥೆಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶ ಹಾಗೂ ಇತರ ನಗರಗಳಿಗೂ ವಿಸ್ತರಿಸಲಾಗುವುದು. ಈ ವ್ಯವಸ್ಥೆಯನ್ನು ಭೂವಿಜ್ಞಾನ ಸಚಿವಾಲಯದ ಸಮಗ್ರ ಸಮನ್ವಯದೊಂದಿಗೆ ಅಭಿವೃದ್ಧ್ಪಿಪಡಿಸಲಾಗಿದ್ದು, ಅದನ್ನು ವಾಯುಗುಣಮಟ್ಟದ ಮಾಹಿತಿಗಾಗಿನ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಇಗೆ ಶೀಘ್ರವೇ ಹಸ್ತಾಂತರಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News