ಯೂತ್ ಒಲಿಂಪಿಕ್ಸ್: ಕುಸ್ತಿತಾರೆ ಸಿಮ್ರಾನ್‌ಗೆ ಬೆಳ್ಳಿ

Update: 2018-10-14 06:19 GMT

ಬ್ಯುನಸ್ ಐರಿಸ್,ಅ.14: ಭಾರತದ ಕುಸ್ತಿಪಟು ಸಿಮ್ರಾನ್ ಯೂತ್ ಒಲಿಂಪಿಕ್ಸ್‌ನ ಮಹಿಳೆಯರ ಫ್ರೀಸ್ಟೈಲ್ 43 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಇಲ್ಲಿ ಶನಿವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಸಿಮ್ರಾನ್ ಅಮೆರಿಕದ ಎಮಿಲಿ ಶಿಲ್ಸನ್ ವಿರುದ್ಧ 6-11 ಅಂತರದಿಂದ ಸೋತಿದ್ದಾರೆ. ಸಿಮ್ರಾನ್ ಮೊದಲ ಅವಧಿಯಲ್ಲಿ ಎದುರಾಳಿ ಕುಸ್ತಿಪಟುವಿಗೆ 2-9 ಮುನ್ನಡೆ ಬಿಟ್ಟುಕೊಡುವುದರೊಂದಿಗೆ ಸೋಲುವ ಭೀತಿ ಎದುರಿಸಿದ್ದರು. ಭಾರತದ ಕುಸ್ತಿತಾರೆ ಎರಡನೇ ಅವಧಿಯಲ್ಲಿ 4 ಅಂಕ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು.

ಸಿಮ್ರಾನ್ 2017ರ ಕಡೆತ್ ವರ್ಲ್ಡ್ ಚಾಂಪಿಯನ್‌ಶಿಪ್‌ನ 40 ಕೆಜಿ ತೂಕ ವಿಭಾಗದಲ್ಲಿ ಕಂಚು ಜಯಿಸಿದ್ದರು. ಮತ್ತೊಂದೆಡೆ ಶಿಲ್ಸನ್ 2018ರ ವಿಶ್ವ ಚಾಂಪಿಯನ್‌ಶಿಪ್‌ನ 43 ಕೆಜಿ ತೂಕ ವಿಭಾಗದಲ್ಲಿ ಚಿನ್ನ ದ ಪದಕ ಜಯಿಸಿದ್ದಾರೆ.

ಈಗ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತ ಮೂರು ಚಿನ್ನ ಪದಕವಲ್ಲದೆ ಒಟ್ಟು 5 ಬೆಳ್ಳಿ ಪದಕಗಳನ್ನು ಜಯಿಸಿದೆ. ಒಲಿಂಪಿಕ್ಸ್‌ನಲ್ಲಿ ಶಟ್ಲರ್ ಲಕ್ಷ ಸೇನ್(ಚಿನ್ನ), ಶೂಟರ್ ಮನು ಭಾಕರ್(ಬೆಳ್ಳಿ) ಹಾಗೂ ಜುಡೊ ಆಟಗಾರ್ತಿ ತಬಾಬಿ ದೇವಿ(ಬೆಳ್ಳಿ) ಬೇರೆ ದೇಶದ ಅಥ್ಲೀಟ್‌ಗಳೊಂದಿಗೆ ಮಿಕ್ಸೆಡ್ ಟೀಮ್ ವಿಭಾಗದಲ್ಲಿ ಪದಕ ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News