×
Ad

ಮೀ ಟೂ ಅಭಿಯಾನ: ಲೈಂಗಿಕ ಕಿರುಕುಳ ಪ್ರಕರಣಗಳ ವರದಿಗೆ ಡಿಸಿಡಬ್ಲ್ಯುನಿಂದ ಪ್ರತ್ಯೇಕ ಮೇಲ್ ಐಡಿ

Update: 2018-10-14 19:44 IST

ಹೊಸದಿಲ್ಲಿ,ಅ.14: ಮೀ ಟೂ ಅಭಿಯಾನದಡಿ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ವರದಿ ಮಾಡಲು ಪ್ರತ್ಯೇಕ ಇ-ಮೇಲ್ ವಿಳಾಸವೊಂದನ್ನು ದಿಲ್ಲಿ ಮಹಿಳಾ ಆಯೋಗ(ಡಿಸಿಡಬ್ಲ್ಯು)ವು ಅಸ್ತಿತ್ವಕ್ಕೆ ತಂದಿದೆ.

ದೂರುಗಳನ್ನು ಸಲ್ಲಿಸಲು ಪ್ರತ್ಯೇಕ ಇ-ಮೇಲ್ ಐಡಿಯನ್ನು ಆರಂಭಿಸಲಾಗಿದೆ,ಯಾವುದೇ ನೆರವಿಗಾಗಿ ದೂರವಾಣಿ ಸಂಖ್ಯೆ 181ಕ್ಕೆ ಕರೆಯನ್ನೂ ಮಾಡಬಹುದು ಎಂದು ಹೇಳಿಕೆಯಲ್ಲಿ ತಿಳಿಸಿರುವ ಆಯೋಗವು, ಲೈಂಗಿಕ ಅಪರಾಧಗಳ ಘಟನೆಗಳನ್ನು ಪೊಲೀಸರಿಗೆ ಮತ್ತು ಮಹಿಳಾ ಆಯೋಗಕ್ಕೆ ವರದಿ ಮಾಡುವಂತೆ ಮೀ ಟೂ ಅಭಿಯಾನದ ಮಹಿಳೆಯರನ್ನು ಕೋರಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News