×
Ad

ಸುಭಾಷ್ ಘಾಯ್ ಅಪ್ಪಿಕೊಂಡು ಚುಂಬಿಸಲು ಯತ್ನಿಸಿದರು: ನಟಿ ಕೇಟ್ ಶರ್ಮಾ ಆರೋಪ

Update: 2018-10-14 19:51 IST
ಸುಭಾಷ್ ಘಾಯ್ - ಕೇಟ್ ಶರ್ಮಾ

ಮುಂಬೈ, ಅ. 14: ನಿರ್ದೇಶಕ ಸುಭಾಶ್ ಘಾಯ್ ವಿರುದ್ಧ ಟಿವಿ ನಟಿ ಹಾಗೂ ಮಾಡೆಲ್ ಕೇಟ್ ಶರ್ಮಾ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿದ ಬಳಿಕ ಮಾದ್ಯಮ ಉದ್ದೇಶಿಸಿ ಮಾತನಾಡಿದ ಕಾಟೆ, ಬಾಲಿವುಡ್ ನಿರ್ದೇಶಕ ಸುಭಾಷ್ ಘಾಯ್ ತನ್ನನ್ನು ಅಪ್ಪಿಕೊಂಡು ಚುಂಬಿಸಲು ಪ್ರಯತ್ನಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

 ಆಗಸ್ಟ್ 6ರಂದು ಅವರು ನನ್ನನ್ನು ಮನೆಗೆ ಆಹ್ವಾನಿಸಿದರು. ನಾನು ಅವರ ಮನೆಗೆ ಹೋದಾಗ ಅಲ್ಲಿ 5ರಿಂದ 6 ಜನರಿದ್ದರು. ಘಾಯ್ ಮಸಾಜ್ ಮಾಡುವಂತೆ ಎಲ್ಲರ ಮುಂದೆ ನನಗೆ ಹೇಳಿದರು. ಇದು ನನಗೆ ಆಘಾತ ಉಂಟು ಮಾಡಿತು. ನಾನು ಅವರ ಹಿರಿತನಕ್ಕೆ ಗೌರವ ನೀಡಿ ಎರಡರಿಂದ ಮೂರು ನಿಮಿಷಗಳ ಕಾಲ ಮಸಾಜ್ ಮಾಡಿದೆ. ಅನಂತರ ವಾಶ್ ರೂಮ್‌ಗೆ ತೆರಳಿ ಕೈ ತೊಳೆದುಕೊಂಡೆ. ಅವರು ನನ್ನನ್ನು ಹಿಂಬಾಲಿಸಿದರು. ಅಪ್ಪಿಕೊಂಡರು ಹಾಗೂ ಮುತ್ತು ಕೊಟ್ಟರು ಎಂದು ಅವರು ಹೇಳಿದ್ದಾರೆ.

“ನಾನು ಬಿಡುವಂತೆ ಮಾನವಿ ಮಾಡಿದೆ, ಆಗ ‘ಖಳನಾಯಕ ನಿರ್ದೇಶಕ’ ನನಗೆ ಬೆದರಿಕೆ ಒಡ್ಡಿದರು. ನನ್ನನ್ನು ಬಿಡಿ ಎಂದು ಹೇಳಿದೆ. ಅನಂತರ ಅವರು ನನಗೆ ಬೆದರಿಕೆ ಒಡ್ಡಿದರು. ಒಂದು ರಾತ್ರಿ ನನ್ನೊಂದಿಗೆ ಇರದೇ ಇದ್ದರೆ ಚಿತ್ರರಂಗಕ್ಕೆ ಪರಿಚಯಿಸಲಾರೆ ಎಂದು ಅವರು ಬೆದರಿಕೆ ಒಡ್ಡಿದ್ದರು.’’ ಎಂದು ಶರ್ಮಾ ಹೇಳಿದ್ದಾರೆ.

  ಈ ವಾರದ ಆರಂಭದಲ್ಲಿ ಅನಾಮಿಕ ಮಹಿಳೆಯೋರ್ವರು, ಘಾಯ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಆರೋಪಿಸಿದ್ದಾರೆ ಎಂದು ಹೇಳಿದ್ದರು. ಈ ಪೋಸ್ಟ್‌ನಲ್ಲಿ ಘಾಯ್ ಅವರು ಮಾದಕ ದ್ರವ್ಯ ನೀಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಈ ಆರೋಪವನ್ನು ಘಾಯ್ ಅವರ ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News