ರಫೇಲ್‌ನಿಂದ ರಿಲಾಯನ್ಸ್‌ಗೆ ಬರೋಬ್ಬರಿ 30,000 ಕೋಟಿ ರೂ. ರಫ್ತು ಬಾಧ್ಯತೆ: ಕಾಂಗ್ರೆಸ್ ಆರೋಪ

Update: 2018-10-14 16:25 GMT

ಹೊಸದಿಲ್ಲಿ,ಅ.14: 59,000 ಕೋಟಿ ರೂ. ಬೆಲೆಯ 36 ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಿಂದ ಅನಿಲ್ ಅಂಬಾನಿ ಮಾಲಕತ್ವದ ಡಸಾಲ್ಟ್ ರಿಲಾಯನ್ಸ್ ವೈಮಾನಿಕ ಸಂಸ್ಥೆ (ಡಿಆರ್‌ಎಎಲ್)ಗೆ 30,000 ಕೋಟಿ ರೂ. ರಫ್ತು ಬಾಧ್ಯತೆ ಸಿಗುತ್ತಿತ್ತು ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸಿದೆ.

ಈ ಒಪ್ಪಂದದಲ್ಲಿ ಗುತ್ತಿಗೆ ಮೌಲ್ಯದ ಶೇ.50ರಷ್ಟನ್ನು ರಫ್ತು ಬಾಧ್ಯತೆಯಾಗಿ ಬಳಸಲು ಸೂಚಿಸಿದೆ. ಇದರಿಂದಾಗಿ ಡಸಾಲ್ಟ್ ಏವಿಯೇಶನ್ ಮತ್ತು ಅದರ ಪ್ರಮುಖ ಜೊತೆಗಾರರಾದ ಥೇಲ್ಸ್ ಆ್ಯಂಡ್ ಸ್ಯಾಫ್ರನ್ ಏರ್‌ಕ್ರಾಫ್ಟ್ ಇಂಜಿನ್ಸ್ ಮತ್ತು ಎಂಬಿಡಿಎ ಜೊತೆಯಾಗಿ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ, ತಯಾರಿಕೆ ಅಥವಾ ಸೇವೆಗಳಲ್ಲಿ 30,000 ಕೋಟಿ ರೂ. ಹೂಡಿಕೆ ಮಾಡುವಂತೆ ರಕ್ಷಣಾ ಸಚಿವಾಲಯ ಸೂಚಿಸಿತ್ತು. ಮೋದಿ ಸರಕಾರ ಸಂಪೂರ್ಣ 30,000 ಕೋಟಿ ರೂ.ವನ್ನು ಡಸಾಲ್ಟ್ ರಿಲಾಯನ್ಸ್ ಏರೊಸ್ಪೇಸ್ ಲಿ.ಗೆ ಅಕ್ರಮವಾಗಿ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಆ ಆರೋಪವನ್ನು ತಳ್ಳಿ ಹಾಕಿರುವ ಭಾರತ ಮತ್ತು ಫ್ರಾನ್ಸ್‌ನ ಸರಕಾರ ಹಾಗೂ ಡಸಾಲ್ಟ್ ಈ ಯೋಜನೆಯಿಂದ ರಿಲಾಯನ್ಸ್ ಬಹಳ ಕಡಿಮೆ ಪ್ರಯೋಜನವನ್ನು ಪಡೆಯುತ್ತಿತ್ತು ಎಂದು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಡಸಾಲ್ಟ್ ಏವಿಯೇಶನ್‌ನ ಮುಖ್ಯಸ್ಥ ಎರಿಕ್ ಟ್ರೇಪಿಯರ್, ಈ ರಫ್ತು ಬಾಧ್ಯತೆಗಳನ್ನು ನಿರ್ವಹಿಸುವ ಹೊಣೆಯನ್ನು ಹಲವು ಭಾರತೀಯ ಸಂಸ್ಥೆಗಳಿಗೆ ಹಂಚಲಾಗುತ್ತಿತ್ತು. ಇದರಿಂದ ಡಿಆರ್‌ಎಎಲ್ ಕೇವಲ ಹತ್ತನೇ ಒಂದು ಭಾಗವನ್ನಷ್ಟೇ ಪಡೆಯುತ್ತಿತ್ತು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News