ದಿಲ್ಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ತಡೆಯಲು ತುರ್ತು ಯೋಜನೆ ಜಾರಿ

Update: 2018-10-15 17:43 GMT

 ಹೊಸದಿಲ್ಲಿ,ಅ.15: ವಾಯು ಮಾಲಿನ್ಯವನ್ನು ತಡೆಯಲು ದಿಲ್ಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‌ಸಿಆರ್)ದಲ್ಲಿ ತುರ್ತು ಯೋಜನೆಯೊಂದನ್ನು ಸೋಮವಾರ ಜಾರಿಗೊಳಿಸಲಾಗಿದೆ. ಯಂತ್ರಗಳ ಮೂಲಕ ರಸ್ತೆಗಳ ಗುಡಿಸುವಿಕೆ ಮತ್ತು ಸುಗಮ ವಾಹನಗಳ ಸಂಚಾರಕ್ಕಾಗಿ ಆಯಕಟ್ಟಿನ ಸ್ಥಳಗಳಲ್ಲಿ ಸಂಚಾರ ಪೊಲೀಸರ ನಿಯೋಜನೆ,ತ್ಯಾಜ್ಯ ದಹನ ನಿಷೇಧ,ಇಟ್ಟಿಗೆ ಭಟ್ಟಿಗಳಲ್ಲಿ ಮಾಲಿನ್ಯ ನಿಯಂತ್ರಣದಂತಹ ಕ್ರಮಗಳನ್ನು ಯೋಜನೆಯು ಒಳಗೊಂಡಿದೆ.

ಜನರೇಟರ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ,ಆದರೆ ವಿದ್ಯುತ್ ಪೂರೈಕೆ ಸಮಸ್ಯೆಯಿರುವ ಎನ್‌ಸಿಆರ್‌ಗೆ ಇದು ಅನ್ವಯಿಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ರಚನೆಯಾಗಿರುವ ಪರಿಸರ ಮಾಲಿನ್ಯ(ತಡೆ ಮತ್ತು ನಿಯಂತ್ರಣ)ಪ್ರಾಧಿಕಾರದ ಸದಸ್ಯೆ ಅನುಮಿತಾ ರಾಯಚೌಧರಿ ತಿಳಿಸಿದರು.

ತುರ್ತು ಯೋಜನೆಯಡಿ ನಗರದ ವಾಯು ಗುಣಮಟ್ಟವನ್ನು ಆಧರಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News