ಮೂರು ದಿನಗಳಿಂದ ಚೇತರಿಸುತ್ತಿದ್ದ ರೂಪಾಯಿ ಮೌಲ್ಯ ಮತ್ತೆ ಕುಸಿತ

Update: 2018-10-15 17:44 GMT

ಹೊಸದಿಲ್ಲಿ,ಅ.15: ಮೂರು ದಿನಗಳಿಂದ ಚೇತರಿಕೆಯ ಹಾದಿಯಲ್ಲಿದ್ದ ರೂಪಾಯಿ ಸೋಮವಾರ ದಿಕ್ಕು ಬದಲಿಸಿದೆ. ದುರ್ಬಲ ಆರ್ಥಿಕ ಅಂಕಿಅಂಶಗಳ ನಡುವೆಯೇ ಕಚ್ಚಾ ತೈಲಬೆಲೆಗಳ ಏರಿಕೆಯ ಹಿನ್ನೆಲೆಯಲ್ಲಿ ಬೆಳಿಗ್ಗೆ ವಹಿವಾಟು ಆರಂಭಗೊಂಡ ಬೆನ್ನಲ್ಲೇ ಡಾಲರ್‌ನೆದುರು 36 ಪೈಸೆಗಳನ್ನು ಕಳೆದುಕೊಂಡು 73.93ಕ್ಕೆ ತಲುಪಿದ್ದ ರೂಪಾಯಿ ನಂತರ ಕೊಂಚ ಚೇತರಿಸಿಕೊಂಡು ಸದ್ಯಕ್ಕೆ 73.83ರಲ್ಲಿ ನಿಂತಿದೆ.

ಡಾಲರ್‌ಗೆ ಬೇಡಿಕೆ ಹೆಚ್ಚಿದ್ದು ಮತ್ತು ವಿದೇಶಿ ಬಂಡವಾಳದ ನಿರಂತರ ಹೊರಹರಿವು ಕೂಡ ರೂಪಾಯಿ ಪತನಕ್ಕೆ ಪೂರಕವಾಗಿದ್ದವು.

ಶುಕ್ರವಾರ ರೂಪಾಯಿ ಡಾಲರ್‌ನೆದುರು 73.57ರಲ್ಲಿ ಮುಕ್ತಾಯಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News