ಅಪಘಾತಗಳ ತನಿಖೆಗಾಗಿ ಬ್ಲ್ಯಾಕ್ ಬಾಕ್ಸ್ ಅಳವಡಿಸಲು ರೈಲ್ವೇ ಚಿಂತನೆ

Update: 2018-10-15 17:46 GMT

ಹೊಸದಿಲ್ಲಿ,ಅ.15: ರೈಲು ಅಪಘಾತಗಳ ಕಾರಣವನ್ನು ತಿಳಿಯಲು ತನಿಖಾಧಿಕಾರಿಗಳಿಗೆ ಸುಲಭವಾಗಲು ಮತ್ತು ಸಿಬ್ಬಂದಿಯ ನಿರ್ವಹಣೆಯನ್ನು ವೌಲ್ಯಮಾಪನ ಮಾಡುವ ಉದ್ದೇಶದಿಂದ ರೈಲುಗಳಲ್ಲೂ ವಿಮಾನಗಳಲ್ಲಿರುವಂತೆ ‘ಬ್ಲಾಕ್ ಬಾಕ್ಸ್’ ಅಥವಾ ಕಪ್ಪು ಪೆಟ್ಟಿಗೆಗಳನ್ನು ಅಳವಡಿಸಲು ರೈಲ್ವೇ ಇಲಾಖೆ ಚಿಂತನೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ರೈಲ್ವೇಯು ತನ್ನ ರೈಲುಗಳಲ್ಲಿ ಲೊಕೊ ಕ್ಯಾಬ್ ವಾಯ್ಸಾ ರೆಕಾರ್ಡರ್ಸ್ (ಎಲ್‌ಸಿವಿಆರ್)ಗಳನ್ನು ಅಳವಡಿಸಲು ನಿರ್ಧರಿಸಿದೆ. ಈ ವ್ಯವಸ್ಥೆಯನ್ನು ಸದ್ಯ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಈ ವ್ಯವಸ್ಥೆಯಿಂದ ಅಪಘಾತ ನಡೆದ ಸಂದರ್ಭದಲ್ಲಿ ಉಂಟಾದ ನಿರ್ವಹಣಾ ಸಮಸ್ಯೆಗಳು ಮತ್ತು ಮಾನವ ಅಂಶಗಳನ್ನು ಗುರುತಿಸಲು ಸುಲಭವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ವಿಮಾನಗಳಲ್ಲಿ ಬಳಸಲಾಗುವ ಕಪ್ಪು ಪೆಟ್ಟಿಗೆ ಎರಡು ಪ್ರತ್ಯೇಕ ಉಪಕರಣಗಳಿಂದ ತಯಾರಿಸಲ್ಪಟ್ಟಿರುತ್ತದೆ. ವಿಮಾನ ದತ್ತಾಂಶ ರೆಕಾರ್ಡರ್ ಮತ್ತು ಕಾಕ್‌ಪಿಟ್ ಧ್ವನಿ ರೆಕಾರ್ಡರ್. ಇವುಗಳನ್ನು ವಿಮಾನದ ಬಾಲದಲ್ಲಿ ಇಡಲಾಗುತ್ತಿದೆ. ಈ ಭಾಗವು ವಿಮಾನಪಘಾತ ಸಮಯದಲ್ಲಿ ಬಹುತೇಕ ಸುರಕ್ಷಿತವಾಗಿರುವುದರಿಂದ ಬ್ಲಾಕ್ ಬಾಕ್ಸನ್ನು ಇಲ್ಲಿಡುವುದು ಸುರಕ್ಷಿತ ಎಂದು ತಿಳಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News