ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕೆ ಜಿಪಿಎಫ್ ಬಡ್ಡಿದರ ಶೇ.8ಕ್ಕೆ ಏರಿಕೆ

Update: 2018-10-16 14:46 GMT

ಹೊಸದಿಲ್ಲಿ,ಅ.16: ಕೇಂದ್ರ ಸರಕಾರವು ತನ್ನ ನೌಕರರಿಗಾಗಿರುವ ಸಾಮಾನ್ಯ ಭವಿಷ್ಯ ನಿಧಿ(ಜಿಪಿಎಫ್) ಮತ್ತು ಇತರ ಸಂಬಂಧಿತ ಯೋಜನೆಗಳಿಗೆ ಬಡ್ಡಿದರವನ್ನು ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕಾಗಿ ಶೇ.7.6ರಿಂದ ಶೇ.8ಕ್ಕೆ ಏರಿಸಿದೆ. ಈ ಬಡ್ಡಿದರವು ಸಾರ್ವಜನಿಕ ಭವಿಷ್ಯನಿಧಿ ಯೋಜನೆಗೆ ಅನುಗುಣವಾಗಿದೆ.

2018-19ನೇ ಸಾಲಿನ ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಶೇ.7.6 ಬಡ್ಡಿದರವನ್ನು ನಿಗದಿಗೊಳಿಸಲಾಗಿತ್ತು.

ಬಡ್ಡಿದರ ಏರಿಕೆಯು ಕೇಂದ್ರ ಸರಕಾರಿ ನೌಕರರು,ರೈಲ್ವೆ ಮತ್ತು ಸಶಸ್ತ್ರ ಪಡೆಗಳ ಭವಿಷ್ಯ ನಿಧಿಗಳಿಗೆ ಅನ್ವಯಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News