ಸ್ಟರ್ಲೈಟ್ ವಿರೋಧಿ ಪ್ರತಿಭಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

Update: 2018-10-16 14:46 GMT

ಚೆನ್ನೈ, ಅ. 16: ತೂತುಕುಡಿ ಜಿಲ್ಲೆಯಲ್ಲಿ ಸ್ಟರ್ಲೈಟ್ ವಿರೋಧಿ ಪ್ರತಿಭಟನೆ ಸಂದರ್ಭ ಪೊಲೀಸರ ಗುಂಡಿನಿಂದ ಗಾಯಗೊಂಡ ವ್ಯಕ್ತಿ ಸೋಮವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ. ಪ್ರ

ತಿಭಟನೆಯಲ್ಲಿ ಗಾಯಗೊಂಡ ಜಸ್ಟಿನ್ ಕಳೆದ ಐದು ತಿಂಗಳು ಕೋಮಾದಲ್ಲಿ ಇದ್ದರು. ಮೇ 22ರಂದು ತೂತುಕುಡಿಯಲ್ಲಿರುವ ಸ್ಟರ್ಲೈಟ್ ಘಟಕದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರು ಹಾರಿಸಿದ ಗುಂಡಿಗೆ 13 ಮಂದಿ ಸಾವನ್ನಪ್ಪಿದ್ದರು ಹಾಗೂ 60 ಮಂದಿ ಗಾಯಗೊಂಡಿದ್ದರು.

 ಪರಿಸರಕ್ಕೆ ಹಾನಿಯಾಗುತ್ತದೆ ಹಾಗೂ ಅಂತರ್ಜಲ ಮಾಲಿನ್ಯಗೊಳಿಸುತ್ತದೆ ಎಂದು ಪ್ರತಿಪಾದಿಸಿ ಇಲ್ಲಿನ ಸ್ಟರ್ಲೈಟ್ ತಾಮ್ರ ಘಟಕದ ನಿರ್ಮಾಣದ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದರು. ಜನರ ಆಗ್ರಹ ಪರಿಗಣಿಸಿದ್ದ ತಮಿಳುನಾಡು ಸರಕಾರ ಮೇ 28ರಂದು ಈ ಘಟಕ ಮುಚ್ಚಲು ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News