ರಾಜಸ್ಥಾನದಲ್ಲಿ ಝೀಕಾ ವೈರಸ್ ಸೋಂಕು 72ಕ್ಕೆ ಏರಿಕೆ

Update: 2018-10-16 14:49 GMT

ಹೊಸದಿಲ್ಲಿ, ಅ. 16: ರಾಜಸ್ಥಾನದಲ್ಲಿ ಝೀಕಾ ವೈರಸ್ ಸೋಂಕು ಪ್ರಕರಣದ ಸಂಖ್ಯೆ 72ಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ, ರೋಗ ನಿಯಂತ್ರಿಸಲು ಸೊಳ್ಳೆಗಳ ವಂಶಾಭಿವೃದ್ಧಿ ತಡೆಯುವಂತೆ ಹಾಗೂ ರೋಗ ನಿಯಂತ್ರಣ ತಂತ್ರಗಳನ್ನು ಅಳವಡಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

ಈ ವಿಷಯದ ಕುರಿತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅವರು ವಿವಿಧ ರಾಜ್ಯಗಳ ಪ್ರತಿನಿಧಿಗಳ ಸಭೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿದ್ದರು. ಝೀಕಾ ಸೋಂಕು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕೀಟಗಳಿಂದ ಹರಡುವ ರೋಗ ನಿಯಂತ್ರಿಸುವ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿರುವ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸುವಂತೆ ಅವರು ರಾಜ್ಯಗಳಿಗೆ ಸೂಚಿಸಿದ್ದಾರೆ.

 ಲಾರ್ವ ತಡೆ ಚಟುವಟಿಕೆ, ಫಾಗಿಂಗ್ ಸಹಿತ ಕೀಟ ನಿಯಂತ್ರಣ ತಂತ್ರಗಳನ್ನು ಪರಿಣಾಮಕಾರಿಯಾಗಿಸುವಂತೆ ಹಾಗೂ ಝೀಕಾ ವೈರಸ್ ರೋಗವನ್ನು ಪರಿಣಾಮಕಾರಿ ಯಾಗಿ ನಿಯಂತ್ರಿಸಲು ಕೀಟಗಳಿಂದ ಹರಡುವ ರೋಗ ನಿಯಂತ್ರಿಸುವ ರಾಷ್ಟ್ರೀಯ ಕಾರ್ಯಕ್ರಮದ ಅಡಿಯ ನೂತನ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ಸೋಮವಾರ ಮತ್ತೆ 12 ಝೀಕಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜಸ್ಥಾನದಲ್ಲಿ ಝೀಕಾ ವೈರಸ್ ಸೋಂಕು ಪ್ರಕರಣಗಳು 72ಕ್ಕೆ ಏರಿಕೆಯಾಗಿದೆ. ಸೋಂಕಿತ 72 ರೋಗಿಗಳಲ್ಲಿ 60 ಮಂದಿ ಚಿಕಿತ್ಸೆ ಪಡೆದುಕೊಂಡ ಬಳಿಕ ಗುಣಮುಖರಾಗಿದ್ದಾರೆ ಎಂದು ರಾಜಸ್ಥಾನದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News