ಕನ್ಹಯ್ಯ ಕುಮಾರ್-ಬಜರಂಗದಳ ಬೆಂಬಲಿಗರ ನಡುವೆ ಘರ್ಷಣೆ: 6 ಮಂದಿಗೆ ಗಾಯ

Update: 2018-10-16 18:12 GMT

ಪಾಟ್ನಾ, ಅ. 16: ಬೇಗುಸರಾಯ್‌ಯಲ್ಲಿ ಮಂಗಳವಾರ ನಡೆದ ಮೆರವಣಿಗೆ ತಡೆ ಒಡ್ಡಿದ ಹಿನ್ನೆಲೆಯಲ್ಲಿ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ ಬಜರಂಗ ದಳದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

ಘರ್ಷಣೆಯಲ್ಲಿ ಕನಿಷ್ಠ 6 ಮಂದಿಗೆ ಗಾಯಗಳಾಗಿವೆ ಹಾಗೂ ವಾಹನಗಳ ಗಾಜುಗಳು ಪುಡಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕನ್ಹಯ್ಯ ಕುಮಾರ್ ಅವರ ಬೆಂಬಲಿಗರೊಬ್ಬರು ಕಬ್ಬಿಣದ ರಾಡ್‌ನಿಂದ ಹೊಡೆದ ಪರಿಣಾಮ ನಮ್ಮ ಬೆಂಬಲಿಗ ಸೋನು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬಜರಂಗ ದಳದ ಜಿಲ್ಲಾ ಘಟಕದ ಮುಖ್ಯಸ್ಥ ಸುಭಮ್ ಭರದ್ವಾಜ್ ಹೇಳಿದ್ದಾರೆ.

ಮನ್ಸೂರ್‌ಚಾಕ್‌ನಲ್ಲಿ ಸಾರ್ವಜನಿಕ ಸಭೆ ಮುಗಿಸಿಕೊಂಡು ಹಿಂದೆ ಬರುತ್ತಿದ್ದ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಅವರ ವಾಹನವನ್ನು ಬಲಪಂಥೀಯ ಬೆಂಬಲಿಗರು ಭಗವಾನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದಹಿಯಾ ಸಮೀಪ ಬಲವಂತವಾಗಿ ತಡೆದರು ಎಂದು ಕನ್ಹಯ್ಯ ಕುಮಾರ್ ಅವರ ಬೆಂಬಲಿಗರು ಇನ್ನೊಂದೆಡೆ ಆರೋಪಿಸಿದ್ದಾರೆ. ಕನ್ಹಯ್ಯ ಕುಮಾರ್ ಹಾಗೂ ಬಜರಂಗದಳದ ಬೆಂಬಲಿಗರು ಪರಸ್ಪರ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ಕನ್ಹಯ್ಯ ಕುಮಾರ್ ತನ್ನ ಹುಟ್ಟೂರಾದ ಬೇಗುಸರಾಯ್‌ಯಲ್ಲಿ ಮುಂದಿನ ಲೋಕಸಭಾ ಚುನಾಣೆಯ ಸ್ಪರ್ಧಾಕಾಂಕ್ಷಿ. ಬೇಗುಸರಾಯ್‌ ಯಿಂದ ನಮ್ಮ ಅಭ್ಯರ್ಥಿ ಕನ್ಹಯ್ಯ ಕುಮಾರ್ ಎಂದು ಸಿಪಿಐ ಈಗಾಗಲೇ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News