ಪಾಕಿಸ್ತಾನಕ್ಕೆ ಬ್ರಹ್ಮೋಸ್ ಮಾಹಿತಿ ಸೋರಿಕೆ: ಭಾರತೀಯ ಸೇನೆಯ ಯೋಧನ ಬಂಧನ

Update: 2018-10-17 08:29 GMT

ಮೀರತ್, ಅ.17: ಬ್ರಹ್ಮೋಸ್ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಭಾರತೀಯ ಸೇನೆಯ ಯೋಧನೊಬ್ಬನನ್ನು ಉತ್ತರ ಪ್ರದೇಶದ ಮೀರತ್ ನಲ್ಲಿ ಇಂದು ಬಂಧಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರು ಬ್ರಹ್ಮೋಸ್ ಏರೋಸ್ಪೇಸ್ ಪ್ರೈ.ಲಿ. ಇಂಜಿನಿಯರ್ ಒಬ್ಬನನ್ನು ಬಂಧಿಸಿದ ನಂತರ ಮಿಲಿಟರಿ ಗುಪ್ತಚರ ಇಲಾಖೆ ಸಿಗ್ನಲ್ ರೆಜಿಮೆಂಟ್ ನ ಭಾಗವಾಗಿದ್ದ ಯೋಧನನ್ನು ವಶಕ್ಕೆ ಪಡೆದಿದೆ.

10 ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಿದ್ದ ಕಾಂಚನ್ ಸಿಂಗ್ ಕಳೆದ ಮೂರು ತಿಂಗಳಿನಿಂದ ಗುಪ್ತಚರ ಘಟಕದ ನಿಗಾದಲ್ಲಿದ್ದರು. ಪಾಕಿಸ್ತಾನಕ್ಕೆ ಕಾಂಚನ್ ಸಿಂಗ್ ಪ್ರಮುಖ ಮಾಹಿತಿಗಳನ್ನು ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಇಸ್ಲಾಮಾಬಾದ್ ಮೂಲದ ಫೇಸ್ಬುಕ್ ಖಾತೆಗಳ ಜೊತೆ ವ್ಯವಹರಿಸುತ್ತಿದ್ದ ಬ್ರಹ್ಮೋಸ್ ಏರೋಸ್ಪೇಸ್ ಇಂಜಿನಿಯರ್ ನಿಶಾಂತ್ ಅಗರ್ವಾಲ್ ನನ್ನು ಇತ್ತೀಚೆಗೆ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News