ಲೈಂಗಿಕ ದೌರ್ಜನ್ಯ ಪ್ರಕರಣ ತಡೆಯುವ ನಿಟ್ಟಿನಲ್ಲಿ ಹಲವು ಉಪಕ್ರಮ ಜಾರಿಗೊಳಿಸಿದ ನಿರ್ಮಾಪಕರ ಸಂಘ

Update: 2018-10-17 17:51 GMT

ಮುಂಬೈ, ಅ.17: ಲೈಂಗಿಕ ದೌರ್ಜನ್ಯ ಪ್ರಕರಣ ನಿರ್ವಹಿಸಲು ವಿಶೇಷ ಸಮಿತಿಯೊಂದನ್ನು ರಚಿಸಿದ ವಾರದೊಳಗೆ ಇನ್ನಷ್ಟು ಉಪಕ್ರಮ ಜಾರಿಗೆ ಮುಂದಾಗಿರುವ ಭಾರತೀಯ ನಿರ್ಮಾಪಕರ ಸಂಘವು, ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ರಕ್ಷಣೆ ನೀಡುವ ಕಾನೂನನ್ನು ಕೆಲಸ ಮಾಡುವ ಸ್ಥಳದಲ್ಲಿ ಜಾರಿಗೊಳಿಸಿದ್ದೇವೆ ಎಂಬ ದೃಢೀಕರಣ ಪತ್ರಕ್ಕೆ ಎಲ್ಲಾ ಸದಸ್ಯರೂ ಕಡ್ಡಾಯವಾಗಿ ಸಹಿ ಹಾಕುವಂತೆ ಸೂಚಿಸಿದೆ.

 ಸಿನೆಮಾ ಉದ್ಯಮದಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ನಿರ್ವಹಣೆಗಾಗಿ ಕಳೆದ ವಾರ ನಿರ್ಮಾಪಕಿ ಸ್ನೇಹಾ ರಜನಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯ ನಿಯಮ ನಿಬಂಧನೆಗಳನ್ನು ರೂಪಿಸಲು ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ದೃಢೀಕರಣ ಪತ್ರಕ್ಕೆ ಸಹಿ ಹಾಕುವ ನಿಯಮ ಜಾರಿಗೊಳಿಸಲಾಗಿದೆ.

ಸಂಘದ ಪ್ರತಿಯೊಬ್ಬ ಸದಸ್ಯರೂ 30 ದಿನದೊಳಗೆ ಘೋಷಣಾ ಪತ್ರ ಸಲ್ಲಿಸಬೇಕು. ಹೀಗೆ ಮಾಡದವರನ್ನು ಸಂಘದಿಂದ ಉಚ್ಛಾಟಿಸಲಾಗುವುದು . ಕಚೇರಿ ಅಥವಾ ಸಿನೆಮ ಸೆಟ್‌ಗಳಲ್ಲಿ ಕೆಲಸ ಮಾಡುವ ಸಿನೆಮ ನಿರ್ಮಾಣ ಸಂಸ್ಥೆಯ ಸಿಬ್ಬಂದಿಗಳು ಅಥವಾ ಕಲಾವಿದರಿಗೆ ಅತ್ಯುನ್ನತ ದರ್ಜೆಯ ಸುರಕ್ಷತೆಯನ್ನು ಸಂಘದ ಎಲ್ಲಾ ಸದಸ್ಯರೂ ಖಾತರಿಪಡಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News