ನಾನಾ ಪಾಟೇಕರ್ ಅಸಭ್ಯ ವ್ಯಕ್ತಿ: ರಾಜ್ ಠಾಕ್ರೆ

Update: 2018-10-18 04:53 GMT

ಅಮರಾವತಿ, ಅ.18: ನಟ ನಾನಾ ಪಾಟೇಕರ್ ಓರ್ವ ಅಸಭ್ಯ ವ್ಯಕ್ತಿ ಎಂದು ನನಗೆ ಗೊತ್ತಿದೆ. ಆದರೆ, ಅವರು ಲೈಂಗಿಕ ದೌರ್ಜನ್ಯದಂತಹ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆಯಿಲ್ಲ. 'ಮೀ ಟೂ' ಚಳುವಳಿ ಒಂದು ಗಂಭೀರ ವಿಚಾರವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆ ಮಾಡುವುದು ಸರಿಯಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್‌ಎಸ್)ಅಧ್ಯಕ್ಷ ರಾಜ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

ಅಮರಾವತಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಠಾಕ್ರೆ,‘‘ ನಾನಾ ಪಾಟೇಕರ್ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವರೊಬ್ಬ ಅಸಭ್ಯ ವ್ಯಕ್ತಿ. ಅವರು ಹುಚ್ಚಾಟ ಮಾಡುತ್ತಾರೆ. ಆದರೆ, ಅವರು ಲೈಂಗಿಕ ದೌರ್ಜನ್ಯದಂತಹ ಕೆಲಸ ಮಾಡಿರಲಿಕ್ಕಿಲ್ಲ.  ಮೀ ಟೂ ಚಳುವಳಿ ಗಂಭೀರ ವಿಚಾರ. ಈ ಕುರಿತು ಟ್ವಿಟರ್‌ನಲ್ಲಿ ಚರ್ಚಿಸುವುದು ಸರಿಯಲ್ಲ’’ ಎಂದರು.

 ‘‘ಗಗನಕ್ಕೇರುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು, ಡಾಲರ್ ಮುಂದೆ ರೂಪಾಯಿ ವೌಲ್ಯ ಕುಸಿತ ಹಾಗೂ ದೇಶದಲ್ಲಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ‘ಮೀ ಟೂ’ನಂತಹ ಚಳುವಳಿಯನ್ನು ಬಳಸಲಾಗುತ್ತಿದೆ. ಯಾವುದೇ ಮಹಿಳೆಯರು ಕಿರುಕುಳ ಎದುರಿಸಿದರೆ, ಸಹಾಯಕ್ಕಾಗಿ ನಮ್ಮ ಪಕ್ಷವನ್ನು ಸಂಪರ್ಕಿಸಬಹುದು’’ ಎಂದು ಠಾಕ್ರೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News