ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಕಾನೂನು ರಚಿಸಲಿ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Update: 2018-10-18 07:22 GMT

ನಾಗ್ಪುರ, ಅ.18: ಸೂಕ್ತ ಮತ್ತು ಅಗತ್ಯ ಕಾನೂನಿನ ಮೂಲಕ ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಾದಿಯನ್ನು ಸುಗಮಗೊಳಿಸಬೇಕೆಂದು ತಮ್ಮ ವಾರ್ಷಿಕ ವಿಜಯದಶಮಿ ಭಾಷಣದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವು ಆತ್ಮಗೌರವದ ದೃಷ್ಟಿಯಿಂದ ಅಗತ್ಯವಾಗಿದೆ ಹಾಗೂ ಅದು ಉತ್ತಮ ಬಾಂಧವ್ಯ ಮತ್ತು ಏಕತೆಯ ವಾತಾವರಣಕ್ಕೆ ಸಹಕಾರಿ ಎಂದು ಅವರು ಹೇಳಿದ್ದಾರೆ. ``ಅಯೋಧ್ಯೆಯಲ್ಲಿಯೇ ರಾಮ ಜನ್ಮಭೂಮಿಯಿರುವುದು ಎಂಬುದಕ್ಕೆ ಎಲ್ಲಾ ಪುರಾವೆಗಳಿದ್ದರೂ ಆ ಜಾಗವನ್ನು ಮಂದಿರ ನಿರ್ಮಾಣಕ್ಕಾಗಿ ಇನ್ನಷ್ಟೇ ನೀಡಬೇಕಿದೆ. ಕೆಲ ಶಕ್ತಿಗಳು ಈ ಪ್ರಕರಣದ ತೀರ್ಪನ್ನು ವಿವಿಧ ರೀತಿಯ ಹಸ್ತಕ್ಷೇಪಗಳಿಂದ ವಿಳಂಬಿಸಲು ಯತ್ನಿಸುತ್ತಿವೆ'' ಎಂದು ಅವರು  ಹೇಳಿದ್ದಾರೆ.``ಸಮಾಜದ ತಾಳ್ಮೆಯನ್ನು ಯಾರೂ ಕಾರಣವಿಲ್ಲದೆ ಪರೀಕ್ಷಿಸಬಾರದು'' ಎಂದೂ ಅವರು ತಿಳಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಆದಷ್ಟು ಬೇಗ ಆರಂಭಿಸಬೇಕೆಂದು ಸಂಘಪರಿವಾರ ಸಂಘಟನೆಗಳು ಕೇಂದ್ರದ ಮೇಲೆ ಒತ್ತಡ ಹೇರುತ್ತಿರುವ ಸಂದರ್ಭ ಭಾಗವತ್ ಅವರ ಮೇಲಿನ ಹೇಳಿಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News