ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಸ್ ಪಡೆಯಿರಿ

Update: 2018-10-18 08:27 GMT

ಹೊಸದಿಲ್ಲಿ, ಅ.18: ಲೈಂಗಿಕ ಕಿರುಕುಳ ಆರೋಪ ಎದುರಿಸಿ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ ಎಂ.ಜೆ. ಅಕ್ಬರ್ ಅವರು ತಾವು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ವಾಪಸ್‍ ಪಡೆಯಬೇಕೆಂದು ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಆಗ್ರಹಿಸಿದೆ.

``ಅಕ್ಬರ್ ಅವರಂತಹ ಪತ್ರಿಕೋದ್ಯಮದಲ್ಲಿ ಉನ್ನತ ಹುದ್ದೆಯಲ್ಲಿದ್ದಂತಹ ವ್ಯಕ್ತಿಗೆ ತಮ್ಮ ವಿರುದ್ಧದ ಆರೋಪ ಸುಳ್ಳೆಂದು ಸಾಬೀತು ಪಡಿಸಲು ಎಲ್ಲಾ ಕಾನೂನು ಮಾರ್ಗಗಳನ್ನು ಅನುಸರಿಸುವ ಸ್ವಾತಂತ್ರ್ಯವಿದ್ದರೂ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ಮೊರೆ ಹೋಗಿರುವುದು  ವಿಪರ್ಯಾಸವೇ ಸರಿ'' ಎಂದು ‘ಎಡಿಟರ್ಸ್ ಗಿಲ್ಡ್’ ಹೇಳಿದೆ.

ಅಕ್ಬರ್ ಅವರು ಈ ಹಿಂದೆ ‘ಎಡಿಟರ್ಸ್ ಗಿಲ್ಡ್’ ಅಧ್ಯಕ್ಷರಾಗಿದ್ದವರು ಎಂಬುದು ಗಮನಾರ್ಹ. ಅಕ್ಬರ್ ವಿರುದ್ಧ ಆರೋಪ ಮಾಡಿರುವ ಇತರ ಪತ್ರಕರ್ತೆಯರ ವಿರುದ್ಧವೂ ಅವರು ಕಾನೂನಿನ ಮೊರೆ ಹೋದರೆ ಅವರಿಗೂ ಬೆಂಬಲವಾಗಿ ನಿಲ್ಲುವುದಾಗಿ ;ಎಡಿಟರ್ಸ್ ಗಿಲ್ಡ್’ ಹೇಳಿದೆ.

ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಪತ್ರಕರ್ತೆಯರಲ್ಲಿ ಪ್ರಿಯಾ ರಮಣಿ ಮೊದಲಿಗರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News