ಲವ್ ಜಿಹಾದ್ ಹೆಸರಿನಲ್ಲಿ ದ್ವೇಷ ಸಾಧಿಸಲೆತ್ನಿಸಿದ ಬಿಜೆಪಿ, ಸಂಘಪರಿವಾರ ಕ್ಷಮೆ ಯಾಚಿಸಲಿ: ಎಸ್‌ಡಿಪಿಐ

Update: 2018-10-18 11:32 GMT
ಅಬ್ದುಲ್ ಮಜೀದ್

ಹೊಸದಿಲ್ಲಿ,  ಅ,18: ದೇಶದಲ್ಲಿ ಸಂಘಪರಿವಾರ ಪ್ರಾಯೋಜಿತ ‘ಲವ್‌ಜಿಹಾದ್’ ಎಂಬ ಕಟ್ಟುಕಥೆಯಮನ್ನು ಆಧರಿಸಿ ನಡೆದಿದ್ದ ಅಪಪ್ರಚಾರದ ಕುರಿತಂತೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಒ) ನಡೆಸಿದ ತನಿಖೆಯಲ್ಲಿ ಇಂತಹಾ ಒಂದು ಪ್ರಯತ್ನ ದೇಶದಲ್ಲಿ ನಡೆದಿಲ್ಲ ಎಂದು ಹೇಳಿದೆ. ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗಲು ಕೆಲವೊಬ್ಬರು ಸಹಾಯ ಮಾಡಿರಬಹುದೇ ವಿನಃ ಅಲ್ಲಿ ಯಾವುದೇ ಕ್ರಿಮಿನಲ್ ಷಡ್ಯಂತ್ರಗಳು ನಡೆದಿರುವ ಕುರಿತು ಪುರಾವೆ ಲಭಿಸಿಲ್ಲ ಎಂದು ಹೇಳಿದೆ. ಯಾವುದೇ ಮಹಿಳೆಯಾಗಲೀ, ಪುರುಷನಾಗಲೀ ಮತಾಂತರವಾಗಲು ಯಾರದ್ದೇ ಒತ್ತಡಗಳು ನಡೆದಿದ್ದರ ಬಗ್ಗೆ ಪುರಾವೆ ಸಿಗಲಿಲ್ಲ. ಇದೊಂದು ಮುಗಿದ ಅಧ್ಯಾಯವಾಗಿದ್ದು, ಈ ಕುರಿತು ಸುಪ್ರೀಮ್ ಕೋರ್ಟಿಗೆ ಯಾವುದೇ ವರದಿ ಸಲ್ಲಿಸುವುದಿಲ್ಲ ಎಂದು ಎನ್‌ಐಎ ಹಿರಿಯ ಅಧಿಕಾರಿ ಹೇಳಿದ್ದಾರೆ. ಹಾಗಾಗಿ ಲವ್ ಜಿಹಾದ್ ಹೆಸರಿನಲ್ಲಿ ದ್ವೇಷ ಸಾಧಿಸಲು, ರಾಜಕೀಯ ಲಾಭ ಪಡೆಯಲು ಮುಂದಾದ ಬಿಜೆಪಿ, ಸಂಘಪರಿವಾರವು ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಎಸ್‌ಡಿಪಿಐ ಹೇಳಿಕೆಯಲ್ಲಿ ತಿಳಿಸಿದೆ.

ಎನ್‌ಐಎ ತನ್ನ ಆರೋಪಗಳನ್ನು ಸಾಬೀತುಪಡಿಸುವ ಪ್ರಯತ್ನದ ಭಾಗವಾಗಿ 89 ಅಂತಧರ್ಮೀಯ ಪ್ರಕರಣಗಳನ್ನು ಪರೀಕ್ಷಿಸಿ ಅವುಗಳಲ್ಲಿ 11 ಪ್ರಕರಣಗಳನ್ನು ತನಿಖೆಯಲ್ಲಿ ಸೇರಿಸಿತ್ತು. ಆದರೆ ಯಾವುದೇ ಪ್ರಕರಣಗಳಲ್ಲೂ ಕೂಡಾ ಬಲವಂತದ ಮತಾಂತರ, ಸಂಘಟಿತ ಮತಾಂತರಗಳು ನಡೆದ ಬಗ್ಗೆ ಪುರಾವೆಯೇ ಇಲ್ಲ ಎಂದು ಎನ್‌ಐಎ ಹೇಳಿದ್ದು, ಲವ್ ಜಿಹಾದ್ ಎಂದು ಸಂಘಪರಿವಾರದ ಕಟ್ಟುಕಥೆ, ರಾಜಕೀಯಕ್ಕಾಗಿ ಸಮಾಜದಲ್ಲಿ ದ್ವೇಷ ಹುಟ್ಟುಹಾಕುವ ಅಜೆಂಡಾವನ್ನು ಕೊನೆಗೊಳಿಸಿದೆ. ಹಲವು ವರ್ಷಗಳಿಂದ ಬಿಜೆಪಿ, ಸಂಘಪರಿವಾರ ಮತ್ತು ಕೆಲವೊಂದು ಮಾಧ್ಯಮಗಳು ಲವ್ ಜಿಹಾದ್ ನ ಹೆಸರಿನಲ್ಲಿ ಅಪಪ್ರಚಾರವನ್ನು ನಡೆಸುತ್ತಾ ಬಂದಿದೆ. ಒಂದು ಸಮುದಾಯದ ಮೇಲೆ ಸಂಶಯ ಪಡುವಂತಹ ಮತ್ತು ದ್ವೇಷ ಕಲ್ಪಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಹಾದಿಯಾ ಮತ್ತು ಶಫಿನ್ ಜಹಾನ್‌ರ ವಿವಾಹಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪನ್ನು ಪ್ರಕಟಿಸಿತ್ತು. ಹಾದಿಯಾ ಸ್ವತಂತ್ರಳಾಗಿದ್ದು ಯಾವುದೇ ಧರ್ಮವನ್ನು ಸ್ವೀಕರಿಸುವ ಮತ್ತು ಬದುಕುವ ಸ್ವಾತಂತ್ರ್ಯವಿದೆ ಎಂದು ತಿಳಿಸಿತ್ತು ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News