ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಳಂಬ ಏಕೆ? ಪ್ರಧಾನಿಗೆ ಉದ್ದವ್ ಠಾಕ್ರೆ ಪ್ರಶ್ನೆ

Update: 2018-10-18 15:19 GMT

ಮುಂಬೈ, ಅ.18: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಳಂಬ ಮಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಇಂದು ವಾಗ್ದಾಳಿ ನಡೆಸಿದ್ದಾರೆ.

  ‘‘ನೀವು ಭೂಗೋಳದ ಪಠ್ಯಪುಸ್ತಕದಲ್ಲಿ ಕಾಣ ಸಿಗದಿರುವ ದೇಶಗಳಿಗೆ ಭೇಟಿ ನೀಡುತ್ತೀರಿ. ಆದರೆ, ಅಯೋಧ್ಯೆಗೆ ಏಕೆ ಹೋಗುತ್ತಿಲ್ಲ? ಎಂದು ವಾರ್ಷಿಕ ವಿಜಯದಶಮಿ ರ್ಯಾಲಿಯ ವೇಳೆ ಉದ್ದವ್ ಠಾಕ್ರೆ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದರು.

‘‘ನಾನು ನವೆಂಬರ್ 25 ರಂದು ಅಯೋಧ್ಯೆಗೆ ತೆರಳುವೆ. ಅಲ್ಲಿ ಇದೇ ಪ್ರಶ್ನೆಯನ್ನು ಪ್ರಧಾನಿ ಮೋದಿಗೆ ಕೇಳುವೆ’’ ಎಂದು ಠಾಕ್ರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News