ಶಬರಿಮಲೆ ಪ್ರತಿಭಟನಕಾರರು ಬಸ್ಸಿನಿಂದ ನನ್ನ ಪುತ್ರಿಯನ್ನು ಎಳೆದು ಹಾಕಲು ಯತ್ನಿಸಿದರು: ತಂದೆಯ ಆರೋಪ

Update: 2018-10-18 16:04 GMT
ಫೋಟೊ ಕೃಪೆ: www.ndtv.com

ಶಬರಿಮಲೆ, ಅ.18: ಮಧ್ಯಪ್ರದೇಶದ ಕುಟುಂಬವೊಂದು ಶಬರಿಮಲೆಗೆ ಆಗಮಿಸಿದ ಸಂದರ್ಭದಲ್ಲಿ, ಹತ್ತಾರು ಮಂದಿ ಪ್ರತಿಭಟನೆಕಾರರು ಈ ಕುಟುಂಬದ ಜತೆಗಿದ್ದ 22 ವರ್ಷದ ಮಹಿಳೆಯನ್ನು ವಾಹನದಿಂದ ಎಳೆದು ಹಾಕಲು ಪ್ರಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಲು ಕುಟುಂಬ ನಿರ್ಧರಿಸಿತ್ತು. "ಪ್ರತಿಭಟನಾಕಾರರ ಗುಂಪು ನಮ್ಮ ಬಸ್ಸಿನಿಂದ ಮಗಳನ್ನು ಎಳೆದು ಹಾಕಲು ಪ್ರಯತ್ನಿಸಿತು. ಆದರೆ ನಮ್ಮಲ್ಲಿ ಎರಡು ಮೂರು ಮಂದಿ ಆಕೆಯ ರಕ್ಷಣೆಗೆ ನಿಂತು ಆಕೆಯನ್ನು ಕಾಪಾಡಿದೆವು. ಅದೃಷ್ಟವಶಾತ್ ಪೊಲೀಸರು ಮಧ್ಯಪ್ರವೇಶಿಸಿ ಬಸ್ಸಿನ ಬಾಗಿಲು ಮುಚ್ಚಿದರು. ಅವರ ನೆರವಿನಿಂದ ವಾಹನವನ್ನು ವಾಪಾಸು ತಂದು ಹತ್ತಿರದ ಬಸ್ ನಿಲ್ದಾಣದಲ್ಲಿ ನಿಲ್ಲಿಸಲು ಸಾಧ್ಯವಾಯಿತು" ಎಂದು ಮಹಿಳೆಯ ತಂದೆ ಮನೋಜ್ ಆರೋಪಿಸಿದ್ದಾರೆ.

ಘಟನೆ ಬಳಿಕ ಕುಟುಂಬದ ಪುರುಷ ಸದಸ್ಯರು ಮಹಿಳೆ ಹಾಗೂ ಆಕೆಯ ಅತ್ತೆಯನ್ನು ಬಿಟ್ಟು ದೇವಸ್ಥಾನಕ್ಕೆ ತೆರಳಿದರು ಎಂದು ಹೇಳಲಾಗಿದೆ. "ಇನ್ನೆಂದೂ ಶಬರಿಮಲೆಗೆ ಹೋಗುವ ಅಥವಾ ಈ ಪವಿತ್ರ ಸ್ಥಳಕ್ಕೆ ಹೋಗುವಂತೆ ಯಾತ್ರಿಗಳಿಗೆ ಶಿಫಾರಸ್ಸು ಮಾಡುವ ತಪ್ಪು ಮಾಡುವುದಿಲ್ಲ" ಎಂದು ಮನೋಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News