ರೆಹಾನಾಳನ್ನು ಬಿಜೆಪಿ ನಾಯಕ ಸುರೇಂದ್ರನ್ ಹಲವು ಬಾರಿ ಮಂಗಳೂರಿನಲ್ಲಿ ಭೇಟಿಯಾಗಿದ್ದರು: ಆರೋಪ

Update: 2018-10-19 10:20 GMT

ಕೊಚ್ಚಿ, ಅ.19: ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ರೆಹನಾ ಫಾತಿಮಾ ಬಿಜೆಪಿ ನಾಯಕ ಕೆ.ಸುರೇಂದ್ರನ್ ರನ್ನು ಹಲವು ಬಾರಿ ಮಂಗಳೂರಿನಲ್ಲಿ ಭೇಟಿಯಾಗಿದ್ದಾರೆ ಎಂದು ಕಿಸ್ ಆಫ್ ಲವ್ ನಾಯಕಿ ರಶ್ಮಿ ನಾಯರ್ ಆರೋಪಿಸಿದ್ದಾರೆ.  ರೆಹನಾರ ನಡೆ ಶಬರಿಮಲೆ ವಿಚಾರದಲ್ಲಿ ಕೋಮುಗಲಭೆ ಸೃಷ್ಟಿಸುವ  ಸಂಚಿನ ಭಾಗವಾಗಿದೆ ಎಂದು ರಶ್ಮಿ ಹೇಳಿದ್ದಾರೆ.

ರಶ್ಮಿಯವರ ಫೇಸ್‍ಬುಕ್ ಪೋಸ್ಟ್‍ ನ ಪೂರ್ಣ ರೂಪ ಈ ಕೆಳಗಿದೆ

“ಶಬರಿಮಲೆ ವಿಚಾರದಲ್ಲಿ ಗಲಭೆ ಸೃಷ್ಟಿಸುವುದು ಸಂಘಪರಿವಾರದ ಉದ್ದೇಶ ಎಂದು (ಶಬರಿಮಲೆ ಮಹಿಳಾ ಪ್ರವೇಶ ಕುರಿತ ಸುಪ್ರೀಂಕೋರ್ಟಿನ) ತೀರ್ಪು ಪ್ರಕಟವಾದಂದೇ  ನಾನು ಹೇಳಿದ್ದೆ.  ಅಯ್ಯಪ್ಪ ವ್ರತಧಾರಿ ವೇಷದಲ್ಲಿ ಆ ಮಹಿಳೆ  ಅರ್ಧ ದೇಹವನ್ನು ಹೊರಗೆ ತೋರಿಸಿದ ಫೋಟೊ ಪ್ರಕಟಗೊಂಡಾಗ ಸಂಘಪರಿವಾರದಿಂದ ಸುಪಾರಿ ಪಡೆದಿರುವ  ಮುಸ್ಲಿಮರ ಹೆಸರಿನಲ್ಲಿರುವ ಪ್ರೊಫೈಲುಗಳನ್ನು ಸರಿಯಾಗಿ ಪರಿಶೀಲಿಸಿದರೆ ಸಮಾಜಕ್ಕೆ ಒಳ್ಳೆಯದು ಎಂದು ತಿಳಿಸಿದ್ದೆ. ಈಗ ಸಚಿವ  ಕಡಕಂಪಳ್ಳಿ ಸುರೇಂದ್ರನ್  ಹೇಳಿರುವುದನ್ನೇ ಅಂದು ನಾನು  ಹೇಳಿದ್ದು, ಹೋರಾಟಗಾರರಿಗೆ ಡಿಜೆ ಪಾರ್ಟಿ ನಡೆಸುವ ಸ್ಥಳ ಶಬರಿಮಲೆಯಲ್ಲ. ಇಂದು ಕಾಮ್ರೆಡ್   ಸರಿಯಾದ ವಿಷಯವನ್ನೇ ಹೇಳಿದ್ದಾರೆ”.

“ಇನ್ನು ನಾನು ಅಂದು  ಹೇಳದಿರುವ  ಶಬರಿಮಲೆಗೆ ಸಂಬಂಧಿಸಿದ ಕೆಲವು ಗಂಭೀರವಾದ ವಿಷಯಗಳನ್ನು ಹೇಳುವೆ. ರೆಹನಾ ಫಾತಿಮಾ  ಕೇಂದ್ರ ಸರಕಾರದ ಉದ್ಯೋಗಿಯಾಗಿದ್ದು, ಮಂಗಳೂರಿನಲ್ಲಿ ಕೆ.ಸುರೇಂದ್ರನ್‍ರೊಂದಿಗೆ ಹಲವು ಬಾರಿ ಭೇಟಿಯಾಗಿರುವ ವಿಚಾರ ನನಗೆ ಗೊತ್ತಿದೆ. ಕೇರಳದ ಪ್ರಗತಿಶೀಲ ಕ್ಷೇತ್ರಗಳಿಗೆ ನುಗ್ಗಿ ಅದನ್ನು ಅಶ್ಲೀಲಗೊಳಿಸಿ ಬಲಪಂಥೀಯ ಪಕ್ಷಕ್ಕೆ ಜನಬೆಂಬಲವನ್ನು ಹೆಚ್ಚಿಸುವ ಕೆಲಸವನ್ನು ಹಲವು ಬಾರಿ ಇವರು ಸರಿಯಾಗಿ ನಿರ್ವಹಿಸಿದ್ದಾರೆ”.

ಶಬರಿಮಲೆ ವಿಷಯದಲ್ಲಿ ಪ್ರಕಟವಾದ  ಆ ಮಹಿಳೆಯ ಫೋಟೊದಿಂದ ಹಿಡಿದು  ಶಬರಿಮಲೆಗೆ ಪ್ರವೇಶದವರೆಗಿನ ಘಟನೆಗಳು ಕೋಮುಗಲಭೆ ಸೃಷ್ಟಿಸುವ ಸಂಚಿನ ಭಾಗವಾಗಿದೆ. ಇದರ ಜೊತೆಗೆ ಜನಂ ಟಿವಿಯಲ್ಲಿ ಬಂದ ಅಯ್ಯಪ್ಪ ಭಕ್ತರನ್ನು ಮುಸ್ಲಿಮರು ಇರಿದು ಗಾಯಗೊಳಿಸುತ್ತಿದ್ದಾರೆ ಎನ್ನುವ ವಾರ್ತೆಯನ್ನು ಕೂಡ  ಜೋಡಿಸಿ ಓದಬೇಕು. ಆದ್ದರಿಂದ ಪೊಲೀಸ್ ಇಲಾಖೆಯ  ಕ್ರಿಮಿನಲ್ ಅಧಿಕಾರಿಗಳ ಪಟ್ಟಿಯಲ್ಲಿರುವ ಐಜಿ ಶ್ರೀಜಿತ್‍ ರ ಪಾತ್ರವನ್ನು ಕೂಡ  ರಾಜ್ಯ ಸರಕಾರ ತನಿಖೆಗೊಳಪಡಿಸಬೇಕು. ಧಾರ್ಮಿಕ ಭಯೋತ್ಪಾದನೆಯನ್ನು ನೇರವಾಗಿ ಎದುರಿಸುವ ಕೇರಳ ಸರಕಾರವನ್ನು ಜನರು ಬೆಂಬಲಿಸಬೇಕು”.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News