ಪೂಜಾಗೆ ಒಲಿದ ಅದೃಷ್ಟ

Update: 2018-10-21 08:54 GMT

ವಿಶ್ವರೂಪಂ 1 ಹಾಗೂ 2ರಲ್ಲಿ ಕಮಲ್‌ಹಾಸನ್‌ಗೆ ನಾಯಕಿಯಾಗಿ ನಟಿಸಿದ್ದ ನಟಿ ಪೂಜಾ ಕುಮಾರ್‌ಗೆ ಬಾಲಿವುಡ್ ಹಾಗೂ ಮಾಲಿವುಡ್‌ನಲ್ಲಿ ಏಕಕಾಲದಲ್ಲಿ ಅದೃಷ್ಟ ಖುಲಾಯಿಸಿದೆ. ‘ದಿ ಇನ್‌ವಿಸಿಬಲ್ ಮ್ಯಾನ್’ ಎಂಬ ಬಾಲಿವುಡ್ ಕಥಾಸಂಕಲನ (ಅಂಥಲಾಜಿ) ಚಿತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ.ಈ ಚಿತ್ರದ ನಾಲ್ಕು ಕಥಾಭಾಗಗಳ ಪೈಕಿ ಒಂದರಲ್ಲಿ ಪೂಜಾ ಅಭಿನಯಿಸಲಿದ್ದಾರೆ. ಅದರಲ್ಲಿ ಪೂಜಾ, ವಿವಾಹ ವಿಚ್ಛೇದನಗೊಂಡು, ಕೆಫೆಯೊಂದರಲ್ಲಿ ದುಡಿಯುತ್ತಿರುವ ಮಧ್ಯಮವರ್ಗದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಿಯದರ್ಶನ್ ಈ ಚಿತ್ರದ ನಿರ್ದೇಶಕರು. ನಾಲ್ಕು ಕಥೆಗಳನ್ನು ಒಳಗೊಂಡಿರುವ ‘ದಿ ಇನ್‌ವಿಸಿಬಲ್ ಮ್ಯಾನ್’ ಚಿತ್ರವು ಜನಪ್ರಿಯ ಮನರಂಜನಾ ತಾಣ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆಗೆ, ಪೂಜಾಗೆ ಮೋಹನ್‌ಲಾಲ್ ನಾಯಕನಾಗಿರುವ ‘ಮರಕ್ಕಾರ್: ಅರಬಿಕಡಲಿಂಡೆ ಸಿಂಹಮ್’ ಚಿತ್ರದಲ್ಲೂ ತಾನು ನಟಿಸಲಿದ್ದಾರೆ. ಈ ಚಿತ್ರವನ್ನು ಕೂಡಾ ಪ್ರಿಯದರ್ಶನ್ ಅವರೇ ನಿರ್ದೇಶಿಸುತ್ತಿದ್ದಾರೆ. ಮರಕ್ಕಾರ್ ಚಿತ್ರದ ಸ್ಕ್ರಿಪ್ಟ್ ರಚನೆ ಪೂರ್ಣಗೊಂಡಿದ್ದು, ನವೆಂಬರ್ ವೇಳೆ ಚಿತ್ರೀಕರಣ ಆರಂಭವಾಗಲಿದೆಯೆಂದು ಪ್ರಿಯದರ್ಶನ್ ಹೇಳಿಕೊಂಡಿದ್ದಾರೆ.

 ಮರಕ್ಕಾರ್ ಚಿತ್ರವು ಮಲಯಾಳಂ ಚಿತ್ರರಂಗದಲ್ಲೇ ಅತ್ಯಧಿಕ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News