ಆಂತರಿಕ ತನಿಖಾ ಸಮಿತಿ ರಚಿಸಲು ಮುದ್ರಣ,ಪ್ರಕಾಶನ ಸಂಸ್ಥೆಗಳಿಗೆ ನಿರ್ದೇಶ ನೀಡುವಂತೆ ಎನ್‌ಡಬ್ಲ್ಯುಸಿ ಆಗ್ರಹ

Update: 2018-10-21 14:39 GMT

ಹೊಸದಿಲ್ಲಿ,ಅ.21: ಕೆಲಸದ ಸ್ಥಳಗಳಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳದ ದೂರುಗಳ ತನಿಖೆಗಾಗಿ ಆಂತರಿಕ ಸಮಿತಿಗಳನ್ನು ರಚಿಸುವಂತೆ ಮುದ್ರಣ ಮತ್ತು ಪ್ರಕಾಶನ ಸಂಸ್ಥೆಗಳು,ಟಿವಿ ಕಾರ್ಯಕ್ರಮ/ಚಿತ್ರ ನಿರ್ಮಾಣ ಸಂಸ್ಥೆಗಳಿಗೆ ನಿರ್ದೇಶ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಡಬ್ಲ್ಯುಸಿ)ವು ವಾರ್ತಾ ಮತ್ತು ಪ್ರಸಾರ ಸಚಿವಾಲಯವನ್ನು ಆಗ್ರಹಿಸಿದೆ.

ಸಾಂಪ್ರದಾಯಿಕ ಮುದ್ರಣ ಮತ್ತು ಡಿಜಿಟಲ್ ಮಾಧ್ಯಮ ಸಂಸ್ಥೆಗಳಲ್ಲಿಯ ವ್ಯಕ್ತಿಗಳ ವಿರುದ್ಧ ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳಗಳ ಹಲವಾರು ದೂರುಗಳು ಕಳೆದ ಕೆಲವು ದಿನಗಳಲ್ಲಿ ಆಯೋಗಕ್ಕೆ ಬಂದಿದ್ದು, ಈ ಬಗ್ಗೆ ನಾವು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಎನ್‌ಡಬ್ಲ್ಯುಸಿ ಅಧಿಕಾರಿಯೋರ್ವರು ತಿಳಿಸಿದರು.

ಇಂತಹ ಅಪರಾಧಗಳನ್ನು ಎಸಗುವವರಿಗೆ ಕಾನೂನಿನಂತೆ ಶಿಕ್ಷೆಯಾಗುವ ಅಗತ್ಯವಿದೆ ಎಂದೂ ಆಯೋಗವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News