ರಾಹುಲ್ ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಯಾವತ್ತೂ ಘೋಷಿಸಿಲ್ಲ: ಪಿ.ಚಿದಂಬರಂ
Update: 2018-10-22 20:48 IST
ಹೊಸದಿಲ್ಲಿ, ಅ.22: ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡಲಾಗಿದೆ ಎಂಬ ಎಲ್ಲಾ ವರದಿಗಳನ್ನು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ನಿರಾಕರಿಸಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಇದುವರೆಗೂ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಬಿಜೆಪಿಯನ್ನು ಸೋಲಿಸಲು ಮೈತ್ರಿಕೂಟವೊಂದು ರಚನೆಯಾದ ನಂತರ ಈ ಘೋಷಣೆ ಮಾಡಲಿದೆ” ಎಂದವರು ಹೇಳಿದರು.
“ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ನಾವು ಬಯಸುತ್ತಿರುವುದಾಗಿ ನಾವೆಂದೂ ಹೇಳಿಲ್ಲ. ಕೆಲ ಕಾಂಗ್ರೆಸಿಗರು ಈ ಬಗ್ಗೆ ಮಾತನಾಡುತ್ತಿದ್ದಾಗ ಎಐಸಿಸಿ ಮಧ್ಯ ಪ್ರವೇಶಿಸಿ ಅಂತಹ ಮಾತುಗಳನ್ನು ತಡೆದಿದೆ. ಬಿಜೆಪಿಯನ್ನು ಹೊರದಬ್ಬಬೇಕು ಎಂದಷ್ಟೇ ನಾವು ಬಯಸುತ್ತಿದ್ದೇವೆ” ಎಂದವರು ಹೇಳಿದರು.