ಮೆಹುಲ್ ಚೋಕ್ಸಿಯಿಂದ 24 ಲಕ್ಷ ರೂ. ಸ್ವೀಕರಿಸಿದ ಅರುಣ್ ಜೇಟ್ಲಿ ಪುತ್ರಿ: ಕಾಂಗ್ರೆಸ್ ಆರೋಪ

Update: 2018-10-22 15:34 GMT

ಹೊಸದಿಲ್ಲಿ, ಅ.22: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ವಿದೇಶಕ್ಕೆ ಪರಾರಿಯಾಗಿರುವ ಮೆಹುಲ್ ಚೋಕ್ಸಿ ನಡುವೆ ಸಂಬಂಧವಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಜೇಟ್ಲಿ ರಾಜೀನಾಮೆಗೆ ಒತ್ತಾಯಿಸಿದೆ.

ಅರುಣ್ ಜೇಟ್ಲಿ ಮತ್ತು ಅಳಿಯ ಜಯೇಶ್ ಬಕ್ಷಿಯವರ ಕಾನೂನು ಸಂಸ್ಥೆ ಚೋಕ್ಸಿಯ ಬ್ಯಾಂಕ್ ಖಾತೆಗೆ ಹಣ ಡೆಪಾಸಿಟ್ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅರುಣ್ ಜೇಟ್ಲಿ ಪುತ್ರಿ ಮತ್ತು ಆಕೆಯ ಪತಿ 2017ರ ಡಿಸೆಂಬರ್ ನಲ್ಲಿ ಚೋಕ್ಸಿಯ ಗೀತಾಂಜಲಿ ಜೆಮ್ಸ್ ನಿಂದ 24 ಲಕ್ಷ ರೂ.ಗಳನ್ನು ಸ್ವೀಕರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಆರೋಪಿಸಿದ್ದಾರೆ.

ಹಣಕಾಸು ಸಚಿವಾಲಯ, ಇಡಿ ಮತ್ತು ಪ್ರಧಾನಿ ಕಚೇರಿಗೆ ಚೋಕ್ಸಿ ದೇಶ ಬಿಟ್ಟು ಪರಾರಿಯಾಗುವ ವಿಚಾರ ಮೊದಲೇ ತಿಳಿದಿತ್ತು. ಆದರೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News