ಗೋವಾದಲ್ಲಿ ವಿಶ್ವದರ್ಜೆಯ ಆಹಾರ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ: ಪ್ರಭು
Update: 2018-10-22 21:41 IST
ಪಣಜಿ,ಅ.22: ಕೇಂದ್ರದ ರಫ್ತು ತಪಾಸಣೆ ಸಂಸ್ಥೆ(ಇಐಎ) ಮತ್ತು ಭಾರತೀಯ ಗುಣಮಟ್ಟ ಮಂಡಳಿ(ಕ್ಯೂಸಿಐ) ಆಹಾರ ಗುಣಮಟ್ಟದ ಪರೀಕ್ಷೆಗಾಗಿ ವಿಶ್ವದರ್ಜೆಯ ಪ್ರಯೋಗಾಲಯವೊಂದನ್ನು ಗೋವಾದಲ್ಲಿ ಸ್ಥಾಪಿಸಲಿವೆ ಎಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ ಪ್ರಭು ಅವರು ಸೋಮವಾರ ಇಲ್ಲಿ ತಿಳಿಸಿದರು.
ಈ ವಿಷಯದಲ್ಲಿ ಗೋವಾ ಕೃಷಿ ಸಚಿವ ವಿಜಯ್ ಸರದೇಸಾಯಿ ಅವರೊಂದಿಗೆ ಮಾತುಕತೆಗಳನ್ನೂ ಪ್ರಭು ನಡೆಸಿದ್ದಾರೆ.
ಮೀನಿನ ಗುಣಮಟ್ಟದ ಬಗ್ಗೆ ಜನರ ಮನಸ್ಸಿನಲ್ಲಿ ಕೆಲವು ಆತಂಕಗಳಿವೆ ಎಂದು ಕಳೆದ ವಾರ ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದರು. ತಿನ್ನುವ ಯಾವುದೇ ವಸ್ತುವಾದರೂ ಅತ್ಯುತ್ತಮ ಗುಣಮಟ್ಟದ್ದಾಗಿರಬೇಕು. ಹೀಗಾಗಿ ಗೋವಾದಲ್ಲಿ ವಿಶ್ವದರ್ಜೆಯ ಪ್ರಯೋಗಶಾಲೆಯ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಭು ತಿಳಿಸಿದರು.