×
Ad

ಚೋಕ್ಸಿಯಿಂದ ಜೇಟ್ಲಿ ಪುತ್ರಿಗೆ ಹಣ ವರ್ಗಾವಣೆ: ಖಾತೆ ಸಂಖ್ಯೆ ಟ್ವೀಟ್ ಮಾಡಿದ ರಾಹುಲ್ ಗಾಂಧಿ

Update: 2018-10-22 23:21 IST

ಹೊಸದಿಲ್ಲಿ, ಅ.22: ಬಹುಕೋಟಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣದ ಪ್ರಧಾನ ಆರೋಪಿಯಾಗಿರುವ ಮೆಹುಲ್ ಚೋಕ್ಸಿಯ ವೇತನದ ಪಟ್ಟಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಅವರ ಪುತ್ರಿಯ ಹೆಸರಿದೆ. ಆದುದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಆಗ್ರಹಿಸಿದ್ದಾರೆ.

ಜೇಟ್ಲಿ ಅವರು ತನಿಖೆ ನಡೆಸಲು ಅವಕಾಶ ನೀಡದೆ ಚೋಕ್ಸಿಗೆ ಪರಾರಿಯಾಗಲು ಅವಕಾಶ ನೀಡಿದರು ಎಂದು ರಾಹುಲ್ ಗಾಂಧಿ ಟ್ವಟರ್‌ನಲ್ಲಿ ಆರೋಪಿಸಿದ್ದಾರೆ. ಜೇಟ್ಲಿ ಪುತ್ರಿಗೆ ಹಣ ವರ್ಗಾವಣೆಯಾದ ಐಸಿಐಸಿಐ ಬ್ಯಾಂಕ್ ಖಾತೆಯ ನಂಬರ್ ಅನ್ನು ಕೂಡ ಅವರು ನೀಡಿದ್ದಾರೆ.

ಮೆಹುಲ್ ಜೋಕ್ಸಿ ಅವರ ವೇತನ ಪಟ್ಟಿಯಲ್ಲಿ ಜೇಟ್ಲಿ ಅವರ ಪುತ್ರಿಯ ಹೆಸರಿದೆ. ಆದುದರಿಂದ ಅರುಣ್ ಜೇಟ್ಲಿ ಅವರು ತನಿಖೆ ನಡೆಸಲು ಆಸಕ್ತಿ ತೋರದೆ ಅವರಿಗೆ ಪರಾರಿಯಾಗಲು ಅವಕಾಶ ನೀಡಿದರು ಎಂದು ಅವರು ಆರೋಪಿಸಿದ್ದಾರೆ.

ವಕೀಲರಾಗಿರುವ ಜೇಟ್ಲಿ ಪುತ್ರಿ ಹಾಗೂ ಅಳಿಯ ಮೆಹುಲ್ ಚೋಕ್ಸಿಯಿಂದ ಶುಲ್ಕವಾಗಿ 24 ಲಕ್ಷ ರೂ. ಸ್ವೀಕರಿಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.

 ಆದಾಗ್ಯೂ, ಮೆಹುಲ್ ಚೋಕ್ಸಿ ಕಂಪೆನಿ ಹಗರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದ ಬಳಿಕ ತನ್ನ ಕಾನೂನು ಸಂಸ್ಥೆ ಆ ಮೊತ್ತವನ್ನು ಹಿಂದಿರುಗಿಸಿತ್ತು ಎಂದು ಜೇಟ್ಲಿ ಅವರ ಅಳಿಯ ಈ ಹಿಂದೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News