×
Ad

ದಿಲ್ಲಿಯಲ್ಲಿ ಇನ್ನಷ್ಟು ಕುಸಿದ ವಾಯು ಗುಣಮಟ್ಟ

Update: 2018-10-24 20:18 IST

ಹೊಸದಿಲ್ಲಿ, ಅ.24: ಅಧಿಕಾರಿಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ದಿಲ್ಲಿಯಲ್ಲಿ ವಾಯು ಗುಣಮಟ್ಟ ಬುಧವಾರ ಇನ್ನಷ್ಟು ಕುಸಿದಿದ್ದು, ಆನಂದ ವಿಹಾರ ಪ್ರದೇಶದಲ್ಲಿ ವಾಯುಮಾಲಿನ್ಯವು ಅಪಾಯಕಾರಿ ಮಟ್ಟವನ್ನು ತಲುಪಿದೆ. ದಿಲ್ಲಿಯ ಪರಿಸರ ಸಚಿವ ಇಮ್ರಾನ್ ಹುಸೇನ್ ಅವರು ವಾಯುಮಾಲಿನ್ಯವನ್ನು ತಡೆಗಟ್ಟಲು ಜಿಲ್ಲಾಡಳಿತ,ದಿಲ್ಲಿ ಪೊಲೀಸ್,ಪಿಡಬ್ಲ್ಯೂಡಿ ಮತ್ತು ವಿವಿಧ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಆರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ.

ತನ್ಮಧ್ಯೆ ಹರ್ಯಾಣ ಮತ್ತು ಪಂಜಾಬ್‌ನ ಅನೇಕ ಕಡೆಗಳಲ್ಲಿ ಬೆಂಕಿ ಉರಿಯುತ್ತಿರುವುದನ್ನು ನಾಸಾದ ಉಪಗ್ರಹ ಚಿತ್ರಗಳು ತೋರಿಸಿವೆ. ಕಳೆದ 10 ದಿನಗಳಲ್ಲಿ ಇವೆರಡು ರಾಜ್ಯಗಳಲ್ಲಿ ಕೃಷಿತ್ಯಾಜ್ಯಗಳನ್ನು ಸುಡುವುದು ಹೆಚ್ಚುತ್ತಿದೆ ಎಂದು ನಾಸಾ ತಿಳಿಸಿದೆ.

ಇತ್ತೀಚಿಗಷ್ಟೇ ವಾಯುಮಾಲಿನ್ಯವನ್ನು ತಡಯಲು ತುರ್ತು ಯೋಜನೆಯೊಂದನ್ನು ಜಾರಿಗೊಳಿಸಿದ್ದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಮುಂದಿನ ಎರಡು ದಿನಗಳಲ್ಲಿ ವಾಯುಮಾಲಿನ್ಯ ಇನ್ನಷ್ಟು ಹೆಚ್ಚುವ ಮುನ್ಸೂಚನೆಯನ್ನು ನೀಡಿತ್ತು.

ಕೃಷಿತ್ಯಾಜ್ಯಗಳ ಸುಡುವಿಕೆಯನ್ನು ತಡೆಯುವಲ್ಲಿ ಕೇಂದ್ರ,ಪಂಜಾಬ್ ಮತ್ತು ಹರ್ಯಾಣ ಸರಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ,ಹೀಗಾಗಿ ದಿಲ್ಲಿ ಶೀಘ್ರವೇ ‘ಗ್ಯಾಸ್ ಚೇಂಬರ್’ ಆಗಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News