ಜ್ಯುವೆಲ್ಲರಿಯಿಂದ 140 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ

Update: 2018-10-24 15:59 GMT

ಕಾನ್ಪುರ, ಅ.24: ಸುಮಾರು 140 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳ ಕಳ್ಳತನಗೈದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಬಿರ್ಜಾನ ರಸ್ತೆಯಲ್ಲಿರುವ ಜ್ಯುವೆಲ್ಲರಿ ಮಾಲಕ ಈ ಬಗ್ಗೆ ದೂರು ನೀಡಿದ್ದಾರೆ.

ವ್ಯವಹಾರ ಪಾಲುದಾರರ ನಡುವಿನ ಮನಸ್ತಾಪದಿಂದ 5 ವರ್ಷಗಳ ಹಿಂದೆ ಜ್ಯುವೆಲ್ಲರಿ ಮುಚ್ಚಿತ್ತು ಎನ್ನಲಾಗಿದೆ. ಈ ಬಗ್ಗೆ ತನಿಖೆ ಆರಂಭವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳ್ಳತನ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 10 ಸಾವಿರ ಕ್ಯಾರೆಟ್ ವಜ್ರ, 500 ಕೆ.ಜಿ. ಬೆಳ್ಳಿ, 100 ಕೆ.ಜಿ. ಚಿನ್ನ ಹಾಗು 5000 ಕ್ಯಾರಟ್ ಆಭರಣಗಳನ್ನು ಕಳ್ಳರು ಕದ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News