ವಂಚನೆಯ ಆರೋಪ: ರಿಲಾಯನ್ಸ್‌ ಜೊತೆಗಿನ ಮೆಡಿಕ್ಲೈಮ್ ಪಾಲಿಸಿ ರದ್ದುಗೊಳಿಸಿದ ಜಮ್ಮು ಕಾಶ್ಮೀರ ರಾಜ್ಯಪಾಲ

Update: 2018-10-25 15:10 GMT

ಜಮ್ಮು ಕಾಶ್ಮೀರ, ಅ. 25: ರಾಜ್ಯ ಸರಕಾರದ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಇರುವ ಅನಿಲ್ ಅಂಬಾನಿ ಅವರ ರಿಲಾಯನ್ಸ್ ಇನ್ಸೂರೆನ್ಸ್ ಲಿಮಿಟೆಡ್‌ನ ಗ್ರೂಪ್ ಮೆಡಿಕ್ಲೈಮ್ ಪಾಲಿಸಿಯನ್ನು ಜಮ್ಮು ಹಾಗೂ ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ರದ್ದುಗೊಳಿಸಿದ್ದಾರೆ.

ತನಿಖೆಯ ಬಳಿಕ ಪೂರ್ಣವಾಗಿ ವಂಚನೆ ಎಂದು ಅರಿವಾದ ಬಳಿಕ ಈ ಯೋಜನೆಯನ್ನು ರದ್ದುಗೊಳಿಸಲು ಆದೇಶಿಸಿದ್ದೇನೆ. ಯೋಜನೆ ರದ್ದುಗೊಳಿಸಿದ ಬಗ್ಗೆ ಕೆಲವು ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮಲಿಕ್ ಅವರು ಜಮ್ಮು ಹಾಗೂ ಕಾಶ್ಮೀರದ ರಾಜ್ಯಪಾಲರಾಗಿ ಆಗಸ್ಟ್‌ನಲ್ಲಿ ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಬಳಿಕ ಅಕ್ಟೋಬರ್ 1ರಿಂದ ಮುಖ್ಯಮಂತ್ರಿ ಅವರ ಗ್ರೂಪ್ ಮೆಡಿಕ್ಲೈಮ್ ಇನ್ಸೂರೆನ್ಸ್ ಪಾಲಿಸಿಯನ್ನು ಅನುಷ್ಠಾನಗೊಳಿಸುವ ಆದೇಶಕ್ಕೆ ಸಹಿ ಹಾಕಿದ್ದರು. ವಾರ್ಷಿಕ ರೂ. 8,777 ಹಾಗೂ ರೂ. 22,229 ವಾರ್ಷಿಕ ಪ್ರಿಮಿಯಂನಲ್ಲಿ ಈ ಪಾಲಿಸಿಗಾಗಿ ರಿಲಾಯನ್ಸ್ ಜನರಲ್ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ನೀತಿಯಿಂದ ಸುಮಾರು 3.5 ಲಕ್ಷ ಉದ್ಯೋಗಿಗಳು ಲಾಭ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ‘‘ರಾಜ್ಯಪಾಲರ ಈ ನಿರ್ಧಾರ ನಮಗೆ ಸಂತಸ ತಂದಿದೆ.’’ ಎಂದು ಉದ್ಯೋಗಿಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅಬ್ದುಲ್ ಖಯಾಮ್ ವಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News