ಗೂಗಲ್ ನಲ್ಲೂ ಲೈಂಗಿಕ ಕಿರುಕುಳ: ವಜಾಗೊಂಡ ಉದ್ಯೋಗಿಗಳೆಷ್ಟು ಗೊತ್ತಾ?

Update: 2018-10-26 16:36 GMT

ನ್ಯೂಯಾರ್ಕ್, ಅ. 26: ಲೈಂಗಿಕ ಕಿರುಕುಳ ಆರೋಪಗಳಿಗೆ ಗುರಿಯಾದ 48 ಉದ್ಯೋಗಿಗಳನ್ನು ಗೂಗಲ್ 2016ರಿಂದ ಕೆಲಸದಿಂದ ಉಚ್ಚಾಟಿಸಿದೆ ಎಂದು ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಹೇಳಿದ್ದಾರೆ.

ಅಧಿಕಾರದ ಹುದ್ದೆಯಲ್ಲಿರುವ ಜನರು ‘ಅನುಚಿತ ವರ್ತನೆ’ ತೋರುವುದನ್ನು ಗೂಗಲ್ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಅವರು ಹೇಳಿದರು.

ಸುರಕ್ಷಿತ ಹಾಗೂ ಆತ್ಮೀಯ ಕೆಲಸದ ವಾತಾವರಣವನ್ನು ಒದಗಿಸುವ ನಿಟ್ಟಿನಲ್ಲಿ ಗೂಗಲ್ ‘ಅತ್ಯಂತ ಗಂಭೀರ’ವಾಗಿದೆ ಎಂದು ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಭಾರತೀಯ ಅಮೆರಿಕನ್ ಪಿಚೈ ತಿಳಿಸಿದ್ದಾರೆ.

ವಜಾಗೊಂಡ ಯಾವುದೇ ಉದ್ಯೋಗಿಗೆ ‘ನಿರ್ಗಮನ ಪರಿಹಾರ’ವನ್ನು ನೀಡಲಾಗಿಲ್ಲ ಎಂದು ಅವರು ನುಡಿದರು.

 ಗೂಗಲ್‌ನ ಆ್ಯಂಡ್ರಾಯ್ಡ್ ಸೃಷ್ಟಿಕರ್ತ ಆ್ಯಂಡಿ ರೂಬಿನ್‌ಗೆ, ಅನುಚಿತ ವರ್ತನೆಯ ಆರೋಪಗಳನ್ನು ಎದುರಿಸುತ್ತಿದ್ದ ಹೊರತಾಗಿಯೂ, 90 ಮಿಲಿಯ ಡಾಲರ್ (ಸುಮಾರು 660 ಕೋಟಿ ರೂಪಾಯಿ) ನಿರ್ಗಮನ ಪರಿಹಾರವನ್ನು ನೀಡಲಾಗಿದೆ ಎಂಬುದಾಗಿ ‘ನ್ಯೂಯಾರ್ಕ್ ಟೈಮ್ಸ್’ ಮಾಡಿದ ವರದಿಗೆ ಪ್ರತಿಯಾಗಿ ಗೂಗಲ್ ಈ ಸ್ಪಷ್ಟೀಕರಣವನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News