ನಿಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೆ

Update: 2018-10-27 09:02 GMT

ಮುಂಬೈ, ಅ.27: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ಬರೆದಿರುವ `ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಕೃತಿಯಾಧಾರಿತ ಅದೇ ಹೆಸರಿನ ಚಲನಚಿತ್ರದಲ್ಲಿ ಸಿಂಗ್ ಅವರ ಪಾತ್ರ ನಿರ್ವಹಿಸಿರುವ  ಹಿರಿಯ ನಟ ಅನುಪಮ್ ಖೇರ್ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಚಿತ್ರೀಕರಣ ಪೂರ್ಣಗೊಂಡಿರುವ ಬಗ್ಗೆ ಟ್ವೀಟ್ ಮಾಡಿ ಮನಮೋಹನ್ ಸಿಂಗ್ ಅವರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

“ನನಗೆ ಬಹಳ ಇಷ್ಟವಾದ  ಚಿತ್ರ #ದಿಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಶೂಟಿಂಗ್ ಅಂತ್ಯಗೊಂಡಿದೆ. ಈ ಚಿತ್ರ ನನಗೆ ಮನಮೋಹನ್ ಸಿಂಗ್ ಅವರ ಬಗ್ಗೆ ಸಾಕಷ್ಟು ತಿಳಿಯುವಂತೆ ಮಾಡಿದೆ. #ಮನಮೋಹನಜೀ ನಿಮ್ಮ ಪಯಣಕ್ಕಾಗಿ ಧನ್ಯವಾದಗಳು. ಚಿತ್ರದಲ್ಲಿ ನಟಿಸುವ ಮುನ್ನ  ನನಗೆ ನನ್ನದೇ ಆದ ಕೆಲವೊಂದು ಸಂಶಯಗಳಿದ್ದವು ಹಾಗೂ ಕೆಲವೊಂದು ಸಂದರ್ಭಗಳಲ್ಲಿ ನಿಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೆ. ಆದರೆ ಇಂದು ಶೂಟಿಂಗ್ ಮುಗಿಸಿದ ನಂತರ ಹಾಗೂ ನಿಮ್ಮ  ಪಾತ್ರದಲ್ಲಿ ಒಂದು ವರ್ಷಕ್ಕೂ ಅಧಿಕ ಸಮಯ  ಜೀವಿಸಿದ ನಂತರ ಇತಿಹಾಸ ನಿಮ್ಮನ್ನು ತಪ್ಪಾಗಿ ಅರ್ಥೈಸುವುದಿಲ್ಲ ಎಂದು ಅತ್ಯಂತ ಪ್ರಾಮಾಣಿಕತೆಯಿಂದ ಹೇಳಬಲ್ಲೆ. ನೀವು ನಮ್ಮ  ಚಲನಚಿತ್ರವನ್ನು ನೋಡಿದ ನಂತರ ನಿಮ್ಮ ಜತೆ ಒಂದು ಕಪ್ ಚಹಾ ಸೇವಿಸುವ ಸಮಯಕ್ಕಾಗಿ ಕಾಯುತ್ತೇನೆ'' ಎಂದು ಬರೆದಿದ್ದಾರೆ.

ಈ ಚಲನಚಿತ್ರದಲ್ಲಿ ಜರ್ಮನ್ ಮೂಲದ ನಟಿ ಸುಝೇನ್ ಬರ್ನರ್ಟ್ ಸೋನಿಯ ಗಾಂಧಿ ಅವರ ಪಾತ್ರ ನಿರ್ವಹಿಸಿದ್ದಾರೆ. ಲಿಪ್‍ಸ್ಟಿಕ್ ಅಂಡರ್ ಮೈ ಬುರ್ಖಾ ಖ್ಯಾತಿಯ ಆಹನಾ ಕುಮಾರ್ ಅವರು ಪ್ರಿಯಾಂಕ ಗಾಂಧಿಯಾಗಿ ಚಿತ್ರದಲ್ಲಿ ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News