ಅಮೆರಿಕಕ್ಕೆ ಭೇಟಿ ನೀಡಲು ಪುಟಿನ್‌ಗೆ ಆಹ್ವಾನ

Update: 2018-10-27 17:34 GMT

ವಾಶಿಂಗ್ಟನ್, ಅ. 27: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಶ್ವೇತಭವನ ವಿಧ್ಯುಕ್ತವಾಗಿ ವಾಶಿಂಗ್ಟನ್‌ಗೆ ಆಹ್ವಾನಿಸಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಶುಕ್ರವಾರ ಹೇಳಿದ್ದಾರೆ.

ರಶ್ಯ ಅಧ್ಯಕ್ಷರನ್ನು ಅಮೆರಿಕಕ್ಕೆ ಆಹ್ವಾನಿಸುವ ನಿರ್ಧಾರವನ್ನು ಜುಲೈಯಲ್ಲೇ ತೆಗೆದುಕೊಳ್ಳಲಾಗಿತ್ತಾದರೂ, ಅಮೆರಿಕದಲ್ಲಿ ಆಕ್ರೋಶಕ್ಕೆ ಕಾರಣವಾಗಬಹುದು ಎಂಬ ಭೀತಿಯಲ್ಲಿ ಅದನ್ನು ತಡೆಹಿಡಿಯಲಾಗಿತ್ತು.

ಫಿನ್‌ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಯಲ್ಲಿ ಜುಲೈಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪುಟಿನ್ ನಡುವೆ ಶೃಂಗ ಸಮ್ಮೇಳನ ನಡೆದ ಸಂದರ್ಭದಲ್ಲೇ ಈ ಆಹ್ವಾನ ನೀಡಲಾಗಿತ್ತು.

ಆದರೆ, ಟ್ರಂಪ್ ರಶ್ಯದೊಂದಿಗೆ ಹೆಚ್ಚಿನ ಸಲುಗೆ ಹೊಂದಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆಹ್ವಾನವನ್ನು ಮುಂದೂಡಲಾಗಿತ್ತು.                                                                                     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News