‘ಹೌಸ್‌ಫುಲ್ 4’ ನಿಂದ ನಾನಾ ಪಾಟೇಕರ್ ಹೊರಕ್ಕೆ

Update: 2018-10-28 11:17 GMT

ತನುಶ್ರೀ ದತ್ತಾ ಅವರ ಲೈಂಗಿಕ ಕಿರುಕುಳದ ಆರೋಪಕ್ಕೆ ಒಳಗಾದ ಬಳಿಕ ಸಾಜಿದ್ ನಾಡಿಯಾಡ್‌ವಾಲರ ‘ಹೌಸ್‌ಫುಲ್ 4’ ಚಿತ್ರದಿಂದ ನಾನಾ ಪಾಟೇಕರ್ ಅವರನ್ನು ಕೈಬಿಡಲಾಗಿದೆ. ಈ ಚಿತ್ರದ ನಿರ್ದೇಶಕ ಸಾಜಿದ್ ಖಾನ್. ಆದರೆ, ಮೀ ಟೂ ಚಳವಳಿಯಲ್ಲಿ ಕೆಲವು ನಟಿಯರು ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಕಾರಣಕ್ಕೆ ಅವರು ನಿರ್ದೇಶಕನ ಸ್ಥಾನದಿಂದ ಕೆಳಗಿಳಿದಿದ್ದರು. ಘಟನೆ ಬಳಿಕ ನಿರ್ದೇಶಕನ ಸ್ಥಾನಕ್ಕೆ ಸಾಜಿದ್ ಬದಲಿಗೆ ಫರ್ಹಾದ್ ಸಾಮ್ಜಿ ಅವರನ್ನು ಆಯ್ಕೆ ಮಾಡಲಾಗಿತ್ತು. ಅಲ್ಲದೆ ಈಗ ನಾನಾ ಪಾಟೇಕರ್ ಸ್ಥಾನಕ್ಕೆ ರಾಣಾ ದಗ್ಗು ಭಾಟಿಯಾ ಅವರನ್ನು ತರಲು ಎಲ್ಲ ಸಿದ್ಧತೆ ನಡೆಯುತ್ತಿದೆ. ಇತ್ತೀಚೆಗಿನ ವರದಿ ಪ್ರಕಾರ ರಾಣಾ ಅವರು ನಟಿಸಲು ಒಪ್ಪಿಕೊಂಡಿದ್ದಾರೆ. ಅಧಿಕೃತ ಹೇಳಿಕೆ ಶೀಘ್ರ ಹೊರಬೀಳಲಿದೆ. ಈ ‘ಹೌಸ್‌ಫುಲ್ 4’ 2019 ಅಕ್ಟೋಬರ್ 25ರಂದು ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News