100 ಕೋ.ರೂ. ಕ್ಲಬ್‌ಗೆ ಬದಾಯಿ ಹೋ

Update: 2018-10-28 12:22 GMT

ಆಯುಷ್ಮಾನ್ ಖುರಾನಾ, ಸಾನ್ಯಾ ಮಲ್ಹೋತ್ರ ನೀನಾ ಗುಪ್ತಾ, ಗಜರಾಜ್ ರಾವ್ ಹಾಗೂ ಇತರ ಹಲವು ನಟ-ನಟಿಯರ ಪ್ರಬುದ್ಧ ಅಭಿನಯದಿಂದ ‘ಬದಾಯಿ ಹೋ’ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಚಿತ್ರಕಥೆ ಈ ಚಿತ್ರದ ನಿಜವಾದ ಹೀರೋ. ಜನರಿಗೆ ಚಿತ್ರ ತಲುಪಲು ಹಾಗೂ ಅವರು ಇಷ್ಟಪಡಲು ಇದು ಕೂಡ ಒಂದು ಕಾರಣ. ‘ಬದಾಯಿ ಹೋ’ ಚಿತ್ರವನ್ನು ಜಂಗ್ಲೀ ಪಿಕ್ಚರ್ಸ್‌ ನಿರ್ಮಾಣ ಮಾಡಿದೆ ಹಾಗೂ ಅಮಿತ್ ಶರ್ಮಾ ನಿರ್ದೇಶಿಸಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ 5 ದಿನಗಳಲ್ಲಿ 50 ಕೋ. ರೂ. ಗಳಿಸಿದೆ. ಕಳೆದ ಶುಕ್ರವಾರ ಬಿಡುಗಡೆಯಾದ ಚಿತ್ರ ಮೊದಲ ದಿನವೇ 7.35 ಕೋ. ರೂ. ಗಳಿಸಿತ್ತು. ಶುಕ್ರವಾರ 11.85 ಕೋ. ರೂ. ಗಳಿಸಿತ್ತು. ಶನಿವಾರ ಹಾಗೂ ರವಿವಾರ 25.50 ಕೋ. ರೂ. ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News