ಬಾಂಗ್ಲಾ ಮಾಜಿ ಪ್ರದಾನಿ ಖಾಲಿದಾ ಜೈಲು ಶಿಕ್ಷೆ ದ್ವಿಗುಣಗೊಳಿಸಿದ ಹೈಕೋರ್ಟ್
Update: 2018-10-30 22:06 IST
ಢಾಕಾ, ಅ. 30: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಝಿಯಾರಿಗೆ ನೀಡಲಾಗಿರುವ ಶಿಕ್ಷೆಯ ಪ್ರಮಾಣವನ್ನು ಹೈಕೋರ್ಟ್ ಮಂಗಳವಾರ ದ್ವಿಗುಣಗೊಳಿಸಿದೆ.
ಖಾಲಿದಾ 2001ರಿಂದ 2006ರವರೆಗಿನ ಅವಧಿಯಲ್ಲಿ ಬಾಂಗ್ಲಾದೇಶದ ಪ್ರಧಾನಿಯಾಗಿದ್ದಾಗ ಅನಾಥಾಶ್ರಮ ಟ್ರಸ್ಟೊಂದಕ್ಕೆ ಬಂದಿದ್ದ ವಿದೇಶಿ ದೇಣಿಗೆ 2.1 ಕೋಟಿ ಟಾಕಾವನ್ನು ಕದ್ದ ಆರೋಪವನ್ನು ಖಾಲಿದಾ, ಅವರ ಮಗ ಮತ್ತು ಅವರ ಸಹಾಯಕರು ಎದುರಿಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಫೆಬ್ರವರಿಯಲ್ಲಿ ಖಾಲಿದಾರಿಗೆ 5 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಗ ಅದನ್ನು ಹೈಕೋರ್ಟ್ 10 ವರ್ಷಕ್ಕೆ ಏರಿಸಿದೆ ಹಾಗೂ ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ನಿರಾಕರಿಸಿದೆ.