ಬಿಬಿಸಿಯ 100 ಅತ್ಯುತ್ತಮ ಜಾಗತಿಕ ಚಿತ್ರಗಳ ಪಟ್ಟಿಯಲ್ಲಿದೆ ಭಾರತದ ಏಕೈಕ ಚಿತ್ರ

Update: 2018-11-01 10:44 GMT

ಹೊಸದಿಲ್ಲಿ, ನ.1: ಬಿಬಿಸಿ ಕಲ್ಚರ್ ಇತ್ತೀಚೆಗೆ 43 ದೇಶಗಳ 209 ಚಿತ್ರ ವಿಮರ್ಶಕರ ಅಭಿಪ್ರಾಯ ಪಡೆದು 21ನೇ ಶತಮಾನದಲ್ಲಿ ಜಗತ್ತಿನ ಅತ್ಯುತ್ತಮ 100 ಚಿತ್ರಗಳ ಪಟ್ಟಿಯನ್ನು ಸಿದ್ಧ ಪಡಿಸಿದ್ದು, ಈ ಪಟ್ಟಿಯಲ್ಲಿ ಜಪಾನಿ ಚಿತ್ರ ‘ಸೆವನ್ ಸಮುರಾಯ್’ ಮೊದಲ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಚಿತ್ರವೆಂದರೆ ಸತ್ಯಜಿತ್ ರೇ ಅವರ 1955ರಲ್ಲಿ ಬಿಡುಗಡೆಗೊಂಡ `ಪಥೇರ್ ಪಾಂಚಾಲಿ'. ಇದು 15ನೇ ಸ್ಥಾನದಲ್ಲಿದೆ.

ಬಿಬಿಸಿ ಪಟ್ಟಿಯಲ್ಲಿರುವ ಚಿತ್ರಗಳ ಪೈಕಿ ಶೇ.25ರಷ್ಟು ಚಿತ್ರಗಳು ಪೂರ್ವ ಏಷ್ಯಾ ದೇಶಗಳದ್ದಾಗಿವೆ. ಈ ಪಟ್ಟಿಯಲ್ಲಿ 11 ಜಪಾನಿ ಭಾಷೆಯ ಚಲನಚಿತ್ರಗಳಿದ್ದರೆ, ಚೀನಾದ 6, ತೈವಾನ್ ದೇಶದ 4, ಹಾಂಗ್‍ಕಾಂಗ್‍ನ 3 ಹಾಗೂ ದಕ್ಷಿಣ ಕೊರಿಯಾದ ಒಂದು ಚಲನಚಿತ್ರ ಸೇರಿದೆ. ಆದರೆ ಟಾಪ್ ಸ್ಥಾನ ಪಡೆದಿರುವ ‘ಸೆವನ್ ಸಮುರಾಯ್’. ಜಪಾನ್ ಹೊರತುಪಡಿಸಿ ಇತರ ದೇಶಗಳ ವಿಮರ್ಶಕರ ಮನಗೆದ್ದಿದೆ. ಬಿಬಿಸಿಯ ಚಿತ್ರ ವಿಮರ್ಶಕರ ಪೈಕಿ ಆರು ಮಂದಿ ಜಪಾನೀಯರಿದ್ದರೂ ಅವರು ಈ ಚಿತ್ರದ ಪರ ಮತ ಚಲಾಯಿಸಿರಲಿಲ್ಲ ಎಂದು ಬಿಬಿಸಿ ತಿಳಿಸಿದೆ.

ಈ ಪಟ್ಟಿಯಲ್ಲಿರುವ ಕೇವಲ 4 ಚಲನಚಿತ್ರಗಳ ನಿರ್ದೇಶಕರುಗಳು ಮಹಿಳೆಯರಾಗಿದ್ದಾರೆ. ಶೇ 45ರಷ್ಟು ಚಿತ್ರ ವಿಮರ್ಶಕರು ಮಹಿಳೆಯರಾಗಿದ್ದರು ಎಂದೂ ಬಿಬಿಸಿ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News