×
Ad

ಕಮಲಾ ಮಿಲ್ಸ್ ಪ್ರಕರಣ ಪಬ್ ಮಾಲlಕರ ಜಾಮೀನು ಅರ್ಜಿ ಬಾಂಬೆ ಹೈಕೋರ್ಟ್‌ನಲ್ಲಿ ತಿರಸ್ಕೃತ

Update: 2018-11-01 19:36 IST

ಮುಂಬೈ,ನ.1: ಮಧ್ಯ ಮುಂಬೈನ ಕಮಲಾ ಮಿಲ್ಸ್ ಆವರಣದಲ್ಲಿಯ ಎರಡು ಪಬ್-ರೆಸ್ಟೋರೆಂಟ್‌ಗಳ ಮಾಲಕರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ತಿರಸ್ಕರಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಈ ಪಬ್‌ಗಳಲ್ಲಿ ಸಂಭವಿಸಿದ್ದ ಅಗ್ನಿ ಅವಘಡಗಳಲ್ಲಿ 14 ಜನರು ಮೃತಪಟ್ಟು,ಇತರ ಹಲವಾರು ಜನರು ಗಾಯಗೊಂಡಿದ್ದರು.

ಮೊಜೊ ಬಿಸ್ಟ್ರೋದ ಮಾಲಕ ಯುಗ್ ಪಾಠಕ್ ಮತ್ತು 1 ಅಬವ್ ಪಬ್‌ನ ಮಾಲಿಕರಾದ ಕೃಪೇಶ ಸಾಂಘ್ವಿ,ಜಿಗರ್ ಸಾಂಘ್ವಿ ಮತ್ತು ಅಭಿಜಿತ ಮಾನ್ಕರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾ.ಪ್ರಕಾಶ ನಾಯ್ಕಾ ಅವರು ವಜಾಗೊಳಿಸಿದರು.

ಈ ನಾಲ್ವರೂ ಆರೋಪಿಗಳನ್ನು ಕಳೆದ ಜನವರಿಯಲ್ಲಿ ಬಂಧಿಸಲಾಗಿದ್ದು,ಹಾಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News