×
Ad

ಬಾಯಿಯಲ್ಲಿ ಪಟಾಕಿ ಸಿಡಿದು 7 ವರ್ಷದ ಬಾಲಕ ಮೃತ್ಯು

Update: 2018-11-02 16:06 IST

ಮುಂಬೈ, ನ.2: ಪಟಾಕಿಯೊಂದು ಬಾಯಿಯಲ್ಲೇ ಸಿಡಿದ ಪರಿಣಾಮ 7 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ನಡೆದಿದೆ. ರಾಯ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪಿಂಪಲಗಾವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ದೀಪಾವಳಿಗೂ ಮೊದಲೇ ಬಾಲಕ ಯಶ್ ಸಂಜಯ್ ಗವಾಟೆ ತನ್ನ ಸ್ನೇಹಿತರ ಜೊತೆಗೂಡಿ ಪಟಾಕಿಗಳನ್ನು ಸಿಡಿಸುತ್ತಿದ್ದ. ಈ ವೇಳೆ ಪಟಾಕಿಯೊಂದು ಸಿಡಿದಿರಲಿಲ್ಲ. ಅದು ಸರಿಯಿಲ್ಲವೆಂದು ಬಾಲಕ ಪಟಾಕಿಗೆ ಕಚ್ಚಿದ್ದು ಪಟಾಕಿ ಇದ್ದಕ್ಕಿದ್ದಂತೆ ಸಿಡಿದಿದೆ.

ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News