ದಿ ನಂಬಿ ಎಫೆಕ್ಟ್ ಗೆ ಮಾಧವನ್ ಹೀರೋ

Update: 2018-11-03 18:51 GMT

ಬೇಹುಗಾರಿಕೆಯ ಸುಳ್ಳು ಆರೋಪದಲ್ಲಿ ಬಂಧಿಸಲ್ಪಟ್ಟು ಆನಂತರ ದೋಷಮುಕ್ತಗೊಂಡ, ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಖ್ಯಾತ ವಿಜ್ಞಾನಿ ನಂಬಿ ನಾರಾಯಣನ್ ಅವರ ಬದುಕು, ಬೆಳ್ಳಿತೆರೆಯಲ್ಲಿ ಮೂಡಿ ಬರಲಿದೆ. ‘ದಿ ನಂಬಿ ಎಫೆಕ್ಟ್’ ಎಂದು ಹೆಸರಿಡಲಾದ ಈ ಚಿತ್ರವು ಹಿಂದಿ, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳಲಿದೆ.

ಖ್ಯಾತ ನಟ ಆರ್. ಮಾಧವನ್ ಚಿತ್ರದಲ್ಲಿ ನಂಬಿ ನಾರಾಯಣನ್ ಅವರ ಪಾತ್ರವನ್ನು ನಿರ್ವಹಿಸ ಲಿದ್ದಾರೆ. ತನ್ನ ಫೇಸ್‌ಬುಕ್ ಪೇಜ್‌ನಲ್ಲಿ, ವಿಶೇಷ ವೀಡಿಯೊವೊಂದನ್ನು ಪ್ರಸಾರ ಮಾಡಿರುವ ಮಾಧವನ್, ‘ರೊಕೆಟ್ರಿ-ದಿ ನಂಬಿ ಎಫೆಕ್’್ಟನಲ್ಲಿ ತಾನು ನಟಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ. ‘‘ಜಗತ್ತಿನಲ್ಲಿ ನೀವು ಕಂಡರಿಯದ, ಕೇಳರಿಯದಂತಹ ಜೀವನಕಥೆಗಳು ಹಲವಾರಿವೆ. ಆದರೆ ಇನ್ನು ಕೆಲವು ಕಥೆಗಳು ನಿಮಗೆ ತಿಳಿದಿರದೇ ಇದ್ದಲ್ಲಿ ನಿಮಗೆ ನಿಮ್ಮ ದೇಶದ ಬಗ್ಗೆ ಹೆಚ್ಚೇನೂ ತಿಳಿದಿಲ್ಲವೆಂದು ಅರ್ಥ. ನಂಬಿನಾರಾಯಣನ್ ಅವರ ಆತ್ಮಕಥೆಯು ಅಂತಹ ಒಂದು ಕತೆಯಾಗಿದೆ. ಆ ವ್ಯಕ್ತಿಯ ಕಥೆಯನ್ನು ಕೇಳಿದಲ್ಲಿ ಹಾಗೂ ಅವರ ಸಾಧನೆಗಳನ್ನು ಗಮನಿ ಸಿದಲ್ಲಿ, ನೀವು ಖಂಡಿತವಾಗಿಯೂ ವೌನವಾಗಿ ಉಳಿಯಲು ಸಾಧ್ಯವಿಲ್ಲ. ‘ರೊಕೆಟ್ರಿ- ದಿ ನಂಬಿ ಎಫೆಕ್’್ಟ ಚಿತ್ರವು ನಂಬಿ ನಾರಾಯಣನ್ ಅವರ ಬದುಕು ಹಾಗೂ ರೋಚಕ ಸಾಧನೆಯ ಬಗ್ಗೆ ತಿಳುವಳಿಕೆಯಿಲ್ಲದವರನ್ನು ಖಂಡಿತ ವಾಗಿಯೂ ಬಡಿದೆಬ್ಬಿಸುತ್ತದೆ’’ ಎಂದು ಮಾಧವನ್ ಹೇಳಿಕೊಂಡಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ವಿಜ್ಞಾನಿಯಾಗಿದ್ದ ನಂಬಿ ನಾರಾ ಯಣನ್, ಪಾಕಿಸ್ತಾನಕ್ಕೆ ಭಾರತದ ಬಾಹ್ಯಾಕಾಶ ಸಂಶೋಧನೆಯ ರಹಸ್ಯ ಗಳನ್ನು ಪಾಕಿಸ್ತಾನಕ್ಕೆ ವರ್ಗಾಯಿಸಿದ್ದರೆಂಬ ಆರೋಪದಲ್ಲಿ ಬಂಧಿತರಾಗಿದ್ದರು. ತರುವಾಯ 1996ರಲ್ಲಿ ಅವರ ವಿರುದ್ಧದ ಆರೋಪಗಳನ್ನು ಸಿಬಿಐ ರದ್ದುಪಡಿಸಿತ್ತು. 1998ರಲ್ಲಿ ಸುಪ್ರೀಂಕೋರ್ಟ್ ಅವರನ್ನು ನಿರ್ದೋಷಿಯೆಂದು ಘೋಷಿಸಿತ್ತು.

‘‘ಇಸ್ರೋದ ವಿಜ್ಞಾನಿ ನಂಬಿ ನಾರಾಯಣನ್ ಅವರ ಅಸಾಧಾರಣ ವಾದ ಬದುಕಿಗೆ ನಾವು ನ್ಯಾಯ ಸಲ್ಲಿಸಲು ದೃಢನಿಶ್ಚಯ ಮಾಡಿದ್ದೇವೆ. ಒಂದು ವೌಲ್ಯಯುತವಾದ ಚಿತ್ರದ ಮೂಲಕ ಗೌರವಿಸಲ್ಪಡಲು ಅರ್ಹರಾದ ಎಲೆಯಮರೆಯ ಕಾಯಿಯಂತಿರುವ ಮಹಾನ್‌ವ್ಯಕ್ತಿಗಳಲ್ಲಿ ನಂಬಿನಾರಾಯಣನ್ ಒಬ್ಬರು. ಇಂತಹ ಒಂದು ಅದ್ಭುತ ಕಥಾವಸ್ತುವಿರುವ ಚಿತ್ರವನ್ನು ನಿರ್ದೇಶಿಸಲು ನನ್ನ ಗೆಳೆಯ ಅನಂತ್ ಮಹಾದೇವನ್‌ಗಿಂತ ಮತ್ತೊಬ್ಬ ಯೋಗ್ಯ ನಿರ್ದೇ ಶಕ ಸಿಗಲಾರರು. ಈ ಚಿತ್ರದ ತಯಾರಿಕೆಗೆ ಇಳಿಯುವ ಮುನ್ನ ಅವರು ನಂಬಿನಾರಾಯಣನ್ ಅವರ ಬದುಕಿನ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದಾರೆಂದು ಮಾಧವನ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News