×
Ad

ಕಂಗನಾ ಈಗ ಕಬಡ್ಡಿ ಆಟಗಾರ್ತಿ

Update: 2018-11-04 00:23 IST

ಮಣಿಕರ್ಣಿಕಾ ಚಿತ್ರ ಪೂರ್ಣಗೊಂಡ ಬೆನ್ನಲ್ಲೇ, ನಟಿ ಕಂಗನಾ ರಾಣಾವತ್ ತನ್ನ ಅಭಿನಯದ ನೂತನ ಚಿತ್ರಕ್ಕೆ ಬಣ್ಣ ಹಚ್ಚಲು ತಯಾರಾಗುತ್ತಿದ್ದಾರೆ. ಹೌದು. ಆಕೆ ಕಬಡ್ಡಿ ಕ್ರೀಡೆಯನ್ನಾಧರಿಸಿದ ‘ಪಂಗಾ’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುವಲ್ಲಿ ಕಂಗನಾ ಎತ್ತಿದ ಕೈ ಎನ್ನುವುದರಲ್ಲಿ ಸಂದೇಹವಿಲ್ಲ. ಮಣಿಕರ್ಣಿಕಾ ಚಿತ್ರದಲ್ಲಿ ರಾಣಿ ಝಾನ್ಸಿ ಲಕ್ಷ್ಮೀ ಬಾಯಿ ಪಾತ್ರ ನಟಿಸಿರುವ ಕಂಗನಾ, ಪಂಗಾದಲ್ಲಿ ಕಬಡ್ಡಿ ಆಟಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನ ಪಾತ್ರಕ್ಕೆ ಜೀವತುಂಬಲೆಂದೇ ಆಕೆ ಕಬಡ್ಡಿ ತರಬೇತಿ ಪಡೆಯುತ್ತಿದ್ದಾರೆ. ಚಿತ್ರದ ಮೊದಲ ಶೆಡ್ಯೂಲ್ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯಲಿದೆ. ಆಶ್ವಿನಿ ಅಯ್ಯರ್ ತಿವಾರಿ ನಿರ್ದೇಶನದ ಪಂಗಾ ಚಿತ್ರದಲ್ಲಿ, ಬಾಲಿವುಡ್‌ನ ಇನ್ನೋರ್ವ ಪ್ರತಿಭಾವಂತ ನಟಿ ರಿಚಾ ಚಡ್ಡಾ ಕೂಡಾ ನಟಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News