ನಾಗತಿಹಳ್ಳಿ ಚಿತ್ರದಲ್ಲಿ ಅನಂತ್‌ನಾಗ್

Update: 2018-11-03 18:57 GMT

ಭರ್ಜರಿ ಯಶಸ್ಸು ಕಂಡಿರುವ ‘ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದ ಬಳಿಕ ಅನಂತ್‌ನಾಗ್‌ಗೆ ಮತ್ತೊಮ್ಮೆ ವಿಶಿಷ್ಟವಾದ ಪಾತ್ರದಲ್ಲಿ ನಟಿಸುವ ಅವಕಾಶ ದೊರೆತಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಅನಂತ್ ‘ರತ್ನಶಾಸ್ತ್ರಜ್ಞ’ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಂತದ ಶೂಟಿಂಗ್ ಲಂಡನ್‌ನಲ್ಲಿ ಪೂರ್ಣ ಗೊಂಡಿದ್ದು, ವಸಿಷ್ಠ ಸಿಂಹ ಹಾಗೂ ಮಾನ್ವಿತಾ ಹರೀಶ್ ನಾಯಕ, ನಾಯಕಿಯರಾಗಿ ನಟಿಸಿದ್ದಾರೆ. ಇದೀಗ ಎರಡನೆ ಹಂತದ ಶೆಡ್ಯೂಲ್‌ನಲ್ಲಿ ಅನಂತ್‌ನಾಗ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಇದೊಂದು ರೋಮ್ಯಾನ್ಸ್ ಹಾಗೂ ಕ್ರೈಮ್ ಮಿಶ್ರಿತ ಕಥಾವಸ್ತುವನ್ನು ಹೊಂದಿದೆ. ಇದರ ಜೊತೆಗೆ ಭಾರತ ಹಾಗೂ ಬ್ರಿಟನ್ ದೇಶಗಳ ನಡುವಿನ ಸಾಂಸ್ಕೃತಿಕ ವೈರುಧ್ಯಗಳ ಬಗ್ಗೆಯೂ ಚಿತ್ರದಲ್ಲಿ ಬೆಳಕು ಚೆಲ್ಲಲು ಯತ್ನಿಸಲಾಗಿದೆ. ಬ್ರಿಟನ್‌ನ ಛಾಯಾಗ್ರಾಹಕ ವಿಲ್ ಪ್ರೈಸ್ ಕ್ಯಾಮರಾ ಹಿಡಿಯಲಿದ್ದಾರೆ. 90ರ ದಶಕದ ಸೂಪರ್ ಹಿಟ್ ಚಿತ್ರ ಅಮೆರಿಕಾ ಅಮೆರಿಕಾ ರೀತಿಯಲ್ಲೇ ಈ ಚಿತ್ರ ವನ್ನು ನಿರ್ದೇಶಿಸಬೇಕೆಂದು ನಾಗತಿಹಳ್ಳಿ ಬಯಸಿದ್ದಾರೆ. ನಾಗತಿಹಳ್ಳಿ ಅವರ ಪುತ್ರಿ ಕನಸು, ಚಿತ್ರಕಥೆ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News