×
Ad

ಬಾಂಗ್ಲಾ: ಯುದ್ಧಾಪರಾಧ: ಇಬ್ಬರಿಗೆ ಮರಣ ದಂಡನೆ

Update: 2018-11-05 22:44 IST

ಢಾಕಾ, ನ. 5: 1971ರ ವಿಮೋಚನಾ ಯುದ್ಧದ ವೇಳೆ ಮಾನವತೆಯ ವಿರುದ್ಧದ ಅಪರಾಧಗಳಿಗಾಗಿ ಹಾಗೂ ಪಾಕಿಸ್ತಾನಿ ಸೇನೆಗೆ ಸಹಾಯ ಮಾಡಿರುವುದಕ್ಕಾಗಿ ಇಬ್ಬರಿಗೆ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿಯೊಂದು ಸೋಮವಾರ ಮರಣ ದಂಡನೆ ವಿಧಿಸಿದೆ.

ಈ ಪೈಕಿ ಒಬ್ಬರು ಆಡಳಿತಾರೂಢ ಅವಾಮಿ ಲೀಗ್‌ನ ಮಾಜಿ ನಾಯಕರಾಗಿದ್ದಾರೆ.

‘‘ಅವರು ಸಾಯುವವರೆಗೆ ಅವರನ್ನು ಕುತ್ತಿಗೆಯ ಮೂಲಕ ನೇತಾಡಿಸಬೇಕು’’ ಎಂದು ಮೂವರು ನ್ಯಾಯಾಧೀಶರ ‘ಬಾಂಗ್ಲಾದೇಶ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ ಅಧ್ಯಕ್ಷ ಮುಹಮ್ಮದ್ ಶಾಹಿನುರ್ ಇಸ್ಲಾಮ್ ಘೋಷಿಸಿದರು.

ತಮ್ಮ ವಯಸ್ಸಿನ 60ರ ದಶಕದಲ್ಲಿರುವ ಇಬ್ಬರೂ ಅಪರಾಧಿಗಳು ತಲೆತಪ್ಪಿಸಿಕೊಂಡಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ವಿಚಾರಣೆ ಮುಗಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News