×
Ad

ಶಾರೂಖ್ ಖಾನ್ ವಿರುದ್ಧ ಪ್ರಕರಣ ದಾಖಲು

Update: 2018-11-06 20:58 IST

ತಮ್ಮ ಮುಂದಿನ ಚಿತ್ರ ‘ಝೀರೋ’ದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದಿಲ್ಲಿ ಸಿಖ್ ಗುರುದ್ವಾರ ಮ್ಯಾನೇಜ್ ಮೆಂಟ್ ಕಮಿಟಿ ಕಾರ್ಯದರ್ಶಿ ಮಂಜೀಂದರ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸಿಖ್ ಸಂಘಟನೆಯಿಂದ ಹಲವು ದೂರುಗಳು ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಾರೂಖ್ ಖಾನ್ ಅಭಿನಯದ ಚಿತ್ರವಾದ ಝೀರೊದಲ್ಲಿ ಶಾರೂಖ್ ಸಿಖ್ಖರ ‘ಗತ್ರಾ ಕಿರ್ಪಾನ್’ ಧರಿಸಿದ್ದಾರೆ. ಇದರಿಂದ ಸಿಖ್ಖರ ಭಾವನೆಗಳಿಗೆ ಧಕ್ಕೆಯಾಗಿದೆ” ಎಂದು ಮಂಜೀಂದರ್ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News