×
Ad

ರೈಲಿನಲ್ಲಿ ಧೂಮಪಾನಕ್ಕೆ ಆಕ್ಷೇಪಿಸಿದ ಗರ್ಭಿಣಿಯ ಹತ್ಯೆ

Update: 2018-11-10 19:11 IST

ಶಾಹಜಹಾನ್‌ಪುರ,ನ.10: ರೈಲಿನಲ್ಲಿ ಸಹಪ್ರಯಾಣಿಕನೋರ್ವ ಧೂಮಪಾನ ಮಾಡುತ್ತಿದ್ದನ್ನು ಆಕ್ಷೇಪಿಸಿದ ತಪ್ಪಿಗೆ ಗರ್ಭಿಣಿಯೋರ್ವಳು ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಶುಕ್ರವಾರ ರಾತ್ರಿ ಇಲ್ಲಿ ನಡೆದಿದೆ.

ಚಿನತ್ ದೇವಿ(45) ಛತ್ ಪೂಜಾ ಉತ್ಸವದಲ್ಲಿ ಪಾಲ್ಗೊಳ್ಳಲು ತನ್ನ ಕುಟುಂಬದೊಂದಿಗೆ ಪಂಜಾಬ್-ಬಿಹಾರ ಜಲಿಯನ್‌ವಾಲಾ ಎಕ್ಸ್‌ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಬಿಹಾರಕ್ಕೆ ಪ್ರಯಾಣಿಸುತ್ತಿದ್ದಳು. ಈ ವೇಳೆ ಸೋನು ಯಾದವ ಎಂಬ ಸಹಪ್ರಯಾಣಿಕ ಧೂಮಪಾನ ಮಾಡುತ್ತಿದ್ದನ್ನು ಆಕೆ ಆಕ್ಷೇಪಿಸಿದ್ದಳು. ವಾಗ್ವಾದ ವಿಕೋಪಕ್ಕೆ ತಲುಪಿದಾಗ ಯಾದವ ಆಕೆಯ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಹಿಸುಕಿದ್ದ. ಚಿನತ್ ದೇವಿ ಕುಸಿದು ಬಿದ್ದಿದ್ದು, ಶಾಹಜಹಾನ್‌ಪುರದಲ್ಲಿ ರೈಲು ನಿಂತಾಗ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಕೆ ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದಳು ಎಂದು ರೈಲ್ವೆ ಪೊಲೀಸರು ತಿಳಿಸಿದರು.

ಆರೋಪಿ ಯಾದವನನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News