ಗುಜರಾತ್‌ನ ಕಛ್‌ನಲ್ಲಿ ಲಘು ಭೂಕಂಪ

Update: 2018-11-10 13:48 GMT

ಅಹ್ಮದಾಬಾದ್,ನ.10: ಕಛ್ ಜಿಲ್ಲೆಯಲ್ಲಿ ಶನಿವಾರ ಅಪರಾಹ್ನ ಲಘು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.1ರಷ್ಟಿತ್ತು.

ಭೂಕಂಪದಿಂದಾಗಿ ಯಾವುದೇ ಸಾವುನೋವು ಅಥವಾ ಆಸ್ತಿಹಾನಿ ಉಂಟಾಗಿಲ್ಲ ಎಂದು ಗಾಂಧಿನಗರದಲ್ಲಿರುವ ಭೂಕಂಪಶಾಸ್ತ್ರ ಸಂಶೋಧನಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದರು.

ಅಪರಾಹ್ನ 12:57ಕ್ಕೆ ಭೂಕಂಪ ಸಂಭವಿಸಿದ್ದು,ಜಿಲ್ಲೆಯ ಭಚಾವುನಿಂದ 14ಕೀ.ಮೀ.ಅಂತರದಲ್ಲಿ ಕೇಂದ್ರಬಿಂದುವಿತ್ತು ಎಂದರು.

2001,ಜನವರಿಯಲ್ಲಿ ಕಛ್ ಜಿಲ್ಲೆಯಲ್ಲಿ ಭಾರೀ ಭೂಕಂಪ ಸಂಭವಿಸಿದ್ದು ಸಾವಿರಾರು ಜನರು ಮೃತಪಟ್ಟಿದ್ದರು ಮತ್ತು ಲಕ್ಷಾಂತರ ಮನೆಗಳು ನೆಲಸಮಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News